ಜೂಜಾಟ: 7 ಜನರ ಬಂಧನ

ಕಲಬುರಗಿ,ನ.2-ಇಲ್ಲಿನ ವಿವೇಕಾನಂದ ನಗರದ ಓಂಕಾರೇಶ್ವರ ಗುಡಿ ಹತ್ತಿರ ಖುಲ್ಲಾ ಜಾಗದಲ್ಲಿ ಜೂಜಾಟವಾಡುತ್ತಿದ್ದ 7 ಜನರನ್ನು ಆರ್.ಜಿ.ನಗರ ಪೊಲೀಸರು ಬಂಧಿಸಿದ್ದಾರೆ.
ವಿಜಯಕುಮಾರ ಖೇಡ, ಕುಪೇಂದ್ರ ಡೋಣಿ, ಶಾಂತಪ್ಪ ಸಾವಳಗಿ, ಅಮೃತ ಮುದ್ದಡಗಿ, ಶಾಂತಪ್ಪಾ ಕಾರಾಂಜಾ, ಗಿರೀಶ ಕಲಶೆಟ್ಟಿ, ಶಿವಪುತ್ರ ಪಸಾರ ಎಂಬುವವರನ್ನು ಬಂಧಿಸಿ 15,584 ರೂ.ನಗದು, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.