ಜೂಜಾಟ: 6 ಜನರ ಬಂಧನ

ಕಲಬುರಗಿ,ನ.29-ನಗರದ ಏಷಿಯನ್ ಬಿಜಿನೆಸ್ ಸೆಂಟರ್ ಕೆಳಗಡೆ ಪಾರ್ಕಿಂಗ್ ಹತ್ತಿರ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಎಎಸ್‍ಐ ನವಾಬ್ ಪಟೇಲ್ ಮತ್ತು ಸಿಬ್ಬಂದಿ ದಾಳಿ ನಡೆಸಿ 6 ಜನರನ್ನು ಬಂಧಿಸಿದ್ದಾರೆ.
ಅಂಬರೀಶ ಕಡಗಂಚಿ, ಸಂಪತ್ ಬಿರಾದಾರ, ಸುಜೀತ್ ಕಟ್ಟಿಮನಿ, ನಾಗರಾಜ ಪೂಜಾರಿ, ಕಿರಣಕುಮಾರ ತಿವಾರಿ ಮತ್ತು ಆಕಾಶ ಕಲ್ಮನಿ ಎಂಬುವವರನ್ನು ಬಂಧಿಸಿ 8,780 ರೂ.ನಗದು ಜಪ್ತಿ ಮಾಡಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.