ಜೂಜಾಟ: 20 ಜನರ ಬಂಧನ, 34,900 ರೂ.ಜಪ್ತಿ

ಕಲಬುರಗಿ,ಸೆ.7-ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಖಣದಾಳ ತಾಂಡಾ, ಫರಹತಾಬಾದ ಗ್ರಾಮದ ಖಣಿ ಹತ್ತಿರ ಮತ್ತು ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟನೂರ ಸೀಮಾಂತರದ ಆಶ್ರಯ ಕಾಲೋನಿಯಲ್ಲಿ ಜೂಜಾಡುತ್ತಿದ್ದ 20 ಜನರನ್ನು ಬಂಧಿಸಿರುವ ಪೊಲೀಸರು 34,900 ರೂ.ನಗದು ಜಪ್ತಿ ಮಾಡಿದ್ದಾರೆ.
ಖಣದಾಳ ತಾಂಡಾದ ಸರ್ಕಾರಿ ಶಾಲೆ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಪಿಎಸ್‍ಐ ರೇಣುಕಾದೇವಿ, ಎಎಸ್‍ಐ ಸೈಯದ್ ಪಟೇಲ್, ಸಿಬ್ಬಂದಿಗಳಾದ ಗಡ್ಡೆಪ್ಪ, ರಾಜಕುಮಾರ, ಕಾಶÀಪ್ಪ, ಆನಂದ ಅವರು ದಾಳಿ ನಡೆಸಿ ಜಯರಾಮ ಜಾಧವ, ಪ್ರದೀಪ ಚವ್ಹಾಣ್, ಮಹೇಶ ಚವ್ಹಾಣ್, ಆಕಾಶ ಗುತ್ತೇದಾರ, ಸಂದೀಪ ಚವ್ಹಾಣ್ ಎಂಬುವವರನ್ನು ಬಂಧಿಸಿ 12,600 ರೂ.ನಗದು ಜಪ್ತಿ ಮಾಡಿದರೆ, ಫರಹತಾಬಾದ ಗ್ರಾಮದ ಖಣಿ ಹತ್ತಿರ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಪಿಐ ಮಲ್ಲಿಕಾರ್ಜುನ ಇಕ್ಕಳಕಿ, ಸಿಬ್ಬಂದಿಗಳಾದ ಮಹಿಬೂಬ್, ಸಾಜೀದ್, ಎಂ.ಆರ್.ಪಟೇಲ್ ಅವರು ದಾಳಿ ನಡೆಸಿ ಗಣಪತಿ ಜಾಧವ್, ಭೀಮಯ್ಯ ದಂಡದುಂಡಕರ, ಲಕ್ಷ್ಮಣ ಜಾಧವ್, ಸುಭಾಷ ಪವಾರ, ಕಲ್ಯಾಣಿ ಪವಾರ, ದುರ್ಗಪ್ಪ ಇಟಗಾ, ರಾಜು ಕುರಡೇಕರ್ ಎಂಬುವವರನ್ನು ಬಂಧಿಸಿ 16,100 ರೂ.ಜಪ್ತಿ ಮಾಡಿದ್ದಾರೆ.
ಕೋಟನೂರ ಸೀಮಾಂತರದ ಆಶ್ರಯ ಕಾಲೋನಿಯಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಎಎಸ್‍ಐ ಹಣಮಂತ ವಾಲಿ, ಸಿಬ್ಬಂದಿಗಳಾದ ಹಾಜಿಮಲಂಗ್, ವಿಶ್ವನಾಥ, ಅನೀಲಕುಮಾರ ಮತ್ತು ಪ್ರೀತಂ ಅವರು ದಾಳಿ ನಡೆಸಿ ಈರಣ್ಣ ಸುತಾರ, ಉದಯಕುಮಾರ ಪಾಟೀಲ, ಯೋಗೇಶ ಬಿರಾದಾರ, ಮಹಾದೇವ ಪಾಟೀಲ, ಅಶೋಕ ಸಿಂಗೆ, ಮಹಾದೇವ ಪೂಜಾರಿ ಎಂಬುವವರನ್ನು ಬಂಧಿಸಿ 6250 ರೂ.ನಗದು ಜಪ್ತಿ ಮಾಡಿದ್ದಾರೆ.
ಫರಹತಾಬಾದ ಮತ್ತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.