ಜೂಜಾಟ: 14 ಜನರ ಬಂಧನ,49 ಸಾವಿರ ರೂ.ಜಪ್ತಿ

ಕಲಬುರಗಿ,ಆ.8-ನಗರದ ವಿವಿಧೆಡೆ ದಾಳಿ ನಡೆಸಿರುವ ಪೊಲೀಸರು 14 ಜನರನ್ನು ಬಂಧಿಸಿ 49,310 ರೂಪಾಯಿ ನಗದು ಹಣ ಜಪ್ತಿ ಮಾಡಿದ್ದಾರೆ.
ಸಿಸಿಬಿ ಘಟಕದ ಪಿಎಸ್‍ಐ ಬಸವರಾಜ, ಸಿಬ್ಬಂದಿಗಳಾದ ಅಶೋಕ, ವಿಶ್ವನಾಥ, ಶ್ರೀಶೈಲ್, ಯಲ್ಲಪ್ಪ, ಮಲ್ಲಣಗೌಡ, ರಾಘವೇಂದ್ರ, ಶಿವಕುಮಾರ ಮತ್ತು ನಾಗರಾಜ ಅವರು ದಾಳಿ ನಡೆಸಿ ಸಂಗಮೇಶ್ವರ ಕಾಲೋನಿಯ ಶಿವ ಮಂದಿರ ಹತ್ತಿರ ಮೈದಾನದಲ್ಲಿ ಕುಳಿತು ಜೂಜಾಡುತ್ತಿದ್ದ ಪೃಥ್ವಿರಾಜ ಚವ್ಹಾಣ್, ದೇವರಾಜ ಪಾಟೀಲ, ಸೋಮನಾಥ ಶೇಳಗಿ, ಲಿಂಗರಾಜ ಪಾಟೀಲ ಎಂಬುವವರನ್ನು ಬಂಧಿಸಿ 33,520 ರೂ.ನಗದು ಮತ್ತು 52 ಇಸ್ಪಿಟ್ ಎಲೆ ಜಪ್ತಿ ಮಾಡಿದ್ದಾರೆ.
ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಪಿಎಸ್‍ಐ ಅಶೋಕ ರಾಠೋಡ್ ಮತ್ತು ಸಿಬ್ಬಂದಿಗಳಾದ ಸಂಜುಕುಮಾರ, ಶಿವಶಂಕರ, ಕಿಶೋರ ಅವರು ದಾಳಿ ನಡೆಸಿ ನಂದೂರ ಇಂಡಸ್ಟ್ರಿಯಲ್ ಏರಿಯಾದ ಹೊಲದಲ್ಲಿ ಕುಳಿತು ಜೂಜಾಡುತ್ತಿದ್ದ ಕರ್ಣ ಸಂಗಾವಿ, ಆನಂದ ಬಳಿಚಕ್ರ, ಮಲ್ಲಿನಾಥ ಶಿರೂರ, ಕಮಲೇಶ ಪಾಟೀಲ, ಶಿವಕುಮಾರ ಅಳ್ಳೊಳ್ಳಿ ಎಂಬುವವರನ್ನು ಬಂಧಿಸಿ 11,570 ರೂ.ನಗದು ಮತ್ತು 52 ಇಸ್ಪಿಟ್ ಎಲೆ ಜಪ್ತಿ ಮಾಡಿದ್ದಾರೆ.
ಸಬ್ ಅರ್ಬನ್ ಪೊಲೀಸ್ ಠಾಣೆಯ ಎ.ಎಸ್.ಐ ನಾಗರಾಜ, ಸಿಬ್ಬಂದಿಗಳಾದ ಯಲ್ಲಪ್ಪ, ಜಗದೀಶ, ಶಿವರಾಜ ಅವರು ದಾಳಿ ನಡೆಸಿ ಡಬರಾಬಾದ ಸೀಮಾಂತರದ ಹೊಲದಲ್ಲಿ ಜೂಜಾಡುತ್ತಿದ್ದ ಮಹ್ಮದ್ ಅಲ್ಲಾವುದ್ದಿನ್ ಪಟೇಲ್, ಅಬ್ದುಲ್ ಶೇಖ್, ಖದೀರ್, ಶಂಶೋದ್ದಿನ್ ಎಂಬುವವರನ್ನು ಬಂಧಿಸಿ 4,220 ರೂ.ನಗದು ಮತ್ತು 52 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಆರ್.ಜಿ.ನಗರ, ವಿಶ್ವವಿದ್ಯಾಲಯ ಮತ್ತು ಸಬ್ ಅರ್ಬನ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಮಟಕಾ: ಬಂಧನ
ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಎ.ಎಸ್.ಐ ನಿಜಲಿಂಗಪ್ಪ, ಸಿಬ್ಬಂದಿಗಳಾದ ರಾಜು ಟಾಕಳೆ, ಪ್ರಕಾಶ, ಅನೀಲ ಅವರು ದಾಳಿ ನಡೆಸಿ ನಗರದ ರಾಜಾಪುರದ ಕಲ್ಯಾಣ ಮಂಟಪದ ಹತ್ತಿರ ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದ ಯಾದಗಿರಿ ಜಿಲ್ಲೆಯ ಮುದನಾಳ ಗ್ರಾಮದ ನಾಗೇಶಕುಮಾರ ಎಂಬಾತನನ್ನು ಬಂಧಿಸಿ 4,150 ರೂ.ನಗದು ಜಪ್ತಿ ಮಾಡಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.