ಜೂಜಾಟ: 13 ಜನರ ಬಂಧನ, 37550 ರೂ.ನಗದು ಜಪ್ತಿ

ಕಲಬುರಗಿ,ಏ.17-ನಗರದ ಅಂಚೆ ಕಚೇರಿ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಬ್ರಹ್ಮಪುರ ಪೊಲೀಸ್ ಠಾಣೆಯ ಪಿಎಸ್‍ಐ ಶ್ಯಾಮಸುಂದರ ಮತ್ತು ಸಿಬ್ಬಂದಿ ದಾಳಿ ನಡೆಸಿ 13 ಜನರನ್ನು ಬಂಧಿಸಿ 37550 ರೂ.ನಗದು ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಸಾಗರ ಚವ್ಹಾಣ್, ನಾಗರಾಜ ಶಿವಶೆಟ್ಟಿ, ಹಣಮಂತರಾಯ ಪಾಟೀಲ, ಶಾಂತಪ್ಪ ರೊಟ್ಟಿ, ಅಶೋಕ ಹುಲಿ, ಚಂದ್ರಶೇಖರ ಕೆಸರಟಿ, ಸಂತೋಷ ಪವಾರ, ಸಿದ್ರಾಮ ಡೋಳಸರ, ಶಿವಕುಮಾರ ಚಂದನಕೇರ, ಗುರುಬಸು ಗೊಬ್ಬರ, ಶರಣು ಪಾಟೀಲ, ಸುಶೀಲಕುಮಾರ ಕಾಂಬಳೆ, ಗಂಗಾಧರ ಸಿದ್ರಾಮಗೋಳ ಎಂಬುವವರನ್ನು ಬಂಧಿಸಲಾಗಿದೆ.
ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

910 ಗ್ರಾಂ. ಗಾಂಜಾ ಜಪ್ತಿ
ಬಾಪುನಗರದಲ್ಲಿರುವ ಹಾಳುಬಿದದ ಸರ್ಕಾರಿ ಹಾಸ್ಟೇಲ್ ಒಳಗಡೆ ಒಬ್ಬ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಐ ಪುಲ್ಲಯ್ಯ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಇಸ್ಲಾಂಬಾದ್ ಕಾಲೋನಿಯ ಇಬ್ರಾಹಿಂಖಾನ್ ಮಸೂದ್ ಖಾನ್ (35) ಎಂಬಾತನನ್ನು ಬಂಧಿಸಿ 9 ಸಾವಿರ ರೂ.ಮೌಲ್ಯದ 910 ಗ್ರಾಂ.ಗಾಂಜಾ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.