ಕಲಬುರಗಿ,ಜು.31-ನಗರದ ಬಂದು ಕವಾಲಾ ಕಾಟಾದ ಹಿಂಭಾಗದಲ್ಲಿರುವ ಖಾಲಿ ಜಾಗದ ಮತ್ತು ಯಳವಂತಗಿ (ಕೆ) ಗ್ರಾಮದ ಹೊಲದಲ್ಲಿ ಕುಳಿತು ಜೂಜಾಟವಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇಲೆ ಸಬ್ ಅರ್ಬನ್ ಪೊಲೀಸ್ ಠಾಣೆಯ ಪಿಎಸ್‍ಐ ಸಲಿಮೊದ್ದಿನ್, ಎ.ಎಸ್.ಐ.ಹುಸೇನ್ ಭಾಷಾ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ಜಾಹೀದ್ ಮತ್ತು ಸಿಸಿಬಿ ಘಟಕದ ಸಿಬ್ಬಂದಿಗಳಾದ ವಿಶ್ವನಾಥ, ಅಶೋಕ ಕಟಕೆ, ಯಲ್ಲಪ್ಪ, ಶಿವಕುಮಾರ ಮತ್ತು ನಾಗರಾಜ ಅವರು ದಾಳಿ ನಡೆಸಿ 11 ಜನರನ್ನು ಬಂಧಿಸಿ 61,650 ರೂ.ನಗದು 104 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ನಗರದ ಬಂದು ಕವಾಲಾ ಕಾಟಾದ ಹಿಂದುಗಡೆ ಇರುವ ಖಾಲಿ ಜಾಗದಲ್ಲಿ ಜೂಜಾಡುತ್ತಿದ್ದ ಖಾಜಾ ಕಾಲೋನಿಯ ಅಕ್ಬರ್ ಅಲಿ ಟೇಲರ್, ಬಡೇ ರೋಜಾದ ಬಬ್ಲೂ ಮುಕ್ತಿಯಾರ್, ರೋಜಾದ ಖಾದರ್, ಜುಬೇರ್ ಕಾಲೋನಿಯ ಎಂ.ಡಿ.ಸದ್ದಾಂ, ಶೇಖ್ ರೋಜಾ ಖಾದ್ರಿ ಚೌಕ್‍ನ ಭಾಸೀದ್ ಶೇಖ್, ಬುಲಂದ್ ಪರ್ವೇಜ್ ಕಾಲೋನಿಯ ತಬ್ರೇಜ್ ಭಾಗವಾನ್ ಎಂಬುವವರನ್ನು 45,500 ರೂ.ನಗದು ಜಪ್ತಿ ಮಾಡಲಾಗಿದೆ.
ಯಳವಂತಗಿ (ಕೆ) ಗ್ರಾಮದ ಹೊಲದಲ್ಲಿ ಜೂಜಾಡುತ್ತಿದ್ದ ಸಿದ್ದಾರೂಢ ಬಿರಾದಾರ, ಶಿವಲಿಂಗಪ್ಪ ಹಿರೇಗೌಡ, ಗುರುನಾಥ ಬಿರಾದಾರ, ಪೀರಪ್ಪ ಚಿಂಚೋಳಿ, ಗುರುನಾಥ ಯಳಸಂಗಿ ಎಂಬುವವರನ್ನು ಬಂಧಿಸಿ 16,150 ರೂ.ನಗದು ಜಪ್ತಿ ಮಾಡಲಾಗಿದೆ.