ಜೂಜಾಟ: 10 ಜನರ ಬಂಧನ;63 ಸಾವಿರ ಜಪ್ತಿ

ಕಲಬುರಗಿ,ಜು 3: ನಗರದ ಮೆಹತಾ ಲೇಔಟ್‍ಪ್ರದೇಶದ ಖಾಲಿ ಜಾಗದಲ್ಲಿ ಜೂಜಾಟವಾಡುತ್ತಿದ್ದ 10 ಜನರನ್ನು ಸ್ಟೇಷನ್ ಬಜಾರ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 63,920 ರೂ ಜಪ್ತಿ ಮಾಡಲಾಗಿದೆ. ಈಶಪ್ಪ ಮಠಪತಿ,ಆನಂದ ಪಾಟೀಲ,ರಮೇಶ ಮುಧೋಳ,ಶರಣಗೌಡ ಹೊಸಮನಿ,ಪ್ರವೀಣಕುಮಾರ ಕುಲಕರ್ಣಿ,ಕಲ್ಯಾಣಪ್ಪ ಬಿರಾದಾರ,ಭೂಪೇಂದ್ರಸಿಂಗ್ ಠಾಕೂರ,ಮಹಾದೇವಪ್ಪ ಅಂಗಡಿ,ಮಹೇಶ ಕುಲಕರ್ಣಿ,ಶ್ರೀಶೈಲ ಮಾನೆ ಬಂಧಿತ ಆರೋಪಿಗಳು.ಸ್ಟೇಷನ್ ಬಜಾರ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.