ಜೂಜಾಟ: ಐವರ ಬಂಧನ

ಕಲಬುರಗಿ,ಜೂ.24-ನಗರದ ವೀರೇಂದ್ರ ಪಾಟೀಲ ಬಡಾವಣೆಯ 3ನೇ ಹಂತದಲ್ಲಿರುವ ಹನುಮಾನ ದೇವಸ್ಥಾನದ ಉದ್ಯಾನವನದಲ್ಲಿ ಜೂಜಾಟವಾಡುತ್ತಿದ್ದ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿ 11,140 ರೂ.ನಗದು ಜಪ್ತಿ ಮಾಡಿದ್ದಾರೆ.
ಧನರಾಜ ಅಲಿಯಾಸ್ ಚಿನ್ನಾ ಶೇಳಗಿ ಎಂಬಾತನನ್ನು ಬಂಧಿಸಿ 18,00, ರಮೇಶ ನಂದಿಕೋಲ ಎಂಬಾತನನ್ನು ಬಂಧಿಸಿ 1,140, ನಿಖಿಲೇಶ ಮಾನಕರ ಎಂಬಾತನನ್ನು ಬಂಧಿಸಿ 1,400, ಗುರುನಾಥ ನಿವರಗಿ ಎಂಬಾತನನ್ನು ಬಂಧಿಸಿ 1700, ಸಂಜೀವಕುಮಾರ ಎಂಬಾತನನ್ನು ಬಂಧಿಸಿ 1,650 ರೂ. ಮತ್ತು ಜೂಜಾಟದ ಸ್ಥಳದಲ್ಲಿ ದೊರೆತ 3,140 ರೂ.ನಗದು ಸೇರಿ ಒಟ್ಟು 11,140 ರೂ.ನಗದು ಜಪ್ತಿ ಮಾಡಿದ್ದಾರೆ. ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.