ಜೂಜಾಟ:ಐದು ಜನರ ಬಂಧನ

ಕಲಬುರಗಿ,ಮೇ 28: ನಗರದ ಶೇಖರೋಜಾ ಕಾಲೋನಿ, ಬಸವ ನಗರದ ಹತ್ತಿರ ಜೂಜಾಟವಾಡುತ್ತಿದ್ದ 5 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಬಂಧಿತರಿಂದ 11,380 ರೂ ನಗದು ವಶಪಡಿಸಿಕೊಳ್ಳಲಾಗಿದೆ.
ಶಿವರಾಜ ಆಂದೋಲಾ,ನಾಗರಾಜ ಕೆರಳ್ಳಿ,ರಾಜಯ್ಯ ಗುತ್ತೇದಾರ,ಮಹೇಶ ಮೈಸಲಗಿ ಮತ್ತು ಶರಣಬಸಪ್ಪ ಪಾಟೀಲ ಬಂಧಿತ ಆರೋಪಿಗಳು.
ಸಿಸಿಬಿ ಪೊಲೀಸ್ ಆಯುಕ್ತ ಸಂತೋಷ ಬನ್ನಟ್ಟಿ ನೇತೃತ್ವದಲ್ಲಿ ಸಿಸಿಬಿ ಸಿಬ್ಬಂದಿಗಳು ದಾಳಿ ನಡೆಸಿ ಜೂಜಾಟದಲ್ಲಿ ನಿರತರಾಗಿದ್ದ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.