ಜು.5ರಂದು ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಸಚಿವರು, ಶಾಸಕರು, ಸಂಸದರಿಗೆ ಸನ್ಮಾನ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.01- ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ವತಿಯಿಂದ ಜು. 5ರ ಬುಧವಾರ ವೀರಶೈವ ಲಿಂಗಾಯತ ಸಮುದಾಯದ ನೂತನ ಸಚಿವರು, ಶಾಸಕರು ಹಾಗೂ ಸಂಸದರಿಗೆ ಅಭಿನಂದನಾ ಸಮಾರಂಭವನ್ನು ಆಯೋಜನೆ ಮಾಡಲಾಗಿದೆ.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಲಿಂಗಾಯುತ ಸಂಘಟನಾ ವೇದಿಕೆಯ ರಾಜ್ಯ ಸಂಚಾಲಕ ಎಚ್.ಡಿ. ಮಂಜು ಹೆಗ್ಗೋಠಾರ ಮಾತನಾಡಿ, ನಮ್ಮ ಸಂಘಟನಾ ವೇದಿಕೆಯು ಕಳೆದ ಆರು ವರ್ಷಗಳಿಂದ ನಮ್ಮ ಜನಾಂಗದ ಸಂಘಟನೆ ಹಾಗೂ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಾ ಬಂದಿದೆ. ಸಮಾಜದ ಆಚಾರ, ವಿಚಾರಗಳನ್ನು ಉಳಿಸುವ ಸಂಕಲ್ಪದೊಂದಿಗೆ ಹೋರಾಟ ಮಾಡುತ್ತಾ ಬಂದಿದೆ.
ಬೆಂಗಳೂರಿನಲ್ಲಿರುವ ರವೀಂದ್ರ ಕಲಾ ಕ್ಷೇತ್ರದಲ್ಲಿ ಜು. 5 ರ ಸಂಜೆ 5 ಗಂಟೆಗೆ ನಡೆಯುವ ಅಭಿನಂದನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಬಾಳೆ ಹೊನ್ನೂರು ರಂಭಾಪುರಿ ಪೀಠದ ಶ್ರೀ ಜಗದ್ಗುರು ಶ್ರೀ ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹಾಗು ನಾಡಿನ ವಿವಿಧ ಮಠಗಳ ಪೂಜ್ಯರು, ಗಣ್ಯರು ಭಾಗವಹಿಸಲಿದ್ದಾರೆ. ಅದೇ ದಿನದಂದು ನಮ್ಮ ಜಿಲ್ಲೆಯಿಂದ ಆಯ್ಕೆಯಾಗಿರುವ ಏಕೈಕ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಅವರನ್ನು ಸಹ ಅಹ್ವಾನಿಸಿದ್ದು, ಅವರು ಸಹ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಭಾರತೀಯ ಸಂಸ್ಕøತಿ, ನಾಡು, ನುಡಿ ರಕ್ಷಣೆಯೊಂದಿಗೆ ನಮ್ಮ ಜನಾಂಗದ ಉನ್ನತಿಯು ಸಹ ಮುಖ್ಯವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಈ ಹಿಂದಿನಿಂದಳು ನಮ್ಮ ಸಮುದಾಯದವರ ಕೊಡುಗೆ ಅಪಾರ ಹಾಗೂ ಗಮನಾರ್ಹವಾಗಿದೆ. 2023ರ ಚುನಾವಣೆಯಲ್ಲಿ ವಿವಿಧ ಪಕ್ಷಗಳಿಂದ ನಮ್ಮ ನಮ್ಮ ಸಮುದಾಯದ ಬಂಧುಗಳು ಜಯಗೊಳಿಸಿ, ಶಾಸಕರಾಗಿದ್ದಾರೆ. ಸಚಿವರಾಗಿದ್ದಾರೆ. ಪ್ರಸ್ತುತ ಇರುವ ಲೋಕಸಭೆಯಲ್ಲಿ ಅನೇಕರು ಸಂಸದರಾಗಿ ರಾಜ್ಯ ಅಭಿವೃದ್ದಿಯಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿದ್ದಾರೆ. ಕೇಂದ್ರ ಸಚಿವರಾಗಿ ಸೇವೆಯನ್ನು ಸಲ್ಲಿಸುತ್ತಿರುವುದು ಹೆಮ್ಮ ವಿಚಾರವಾಗಿದೆ. ಈ ಎಲ್ಲಾ ಮಹನೀಯರನ್ನು ವೇದಿಕೆಯ ವತಿಯಿಂದ ಆಹ್ವಾನಿಸಲಾಗಿದ್ದು, ಅದ್ದೂರಿಯಾಗಿ ಅಭಿನಂನಾ ಸಮಾರಂಭಕ್ಕೆ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ರಾಜ್ಯ ಸಂಚಾಲಕ ಮಂಜು ಹೆಗ್ಗೋಠಾರ ಮನವಿ ಮಾಡಿದರು.
ಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಸೋಮಶೇಖರ್, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಶಾಂತಮಲ್ಲಪ್ಪ, ಜಿಲ್ಲಾ ಉಪಾಧ್ಯಕ್ಷ ಪ್ರಭುಸ್ವಾಮಿ, ಸಂಘಟನಾ ಕಾರ್ಯದರ್ಶಿ ಎಸ್. ನಂಜುಂಡಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಎನ್. ಬಸವಣ್ಣ, ಚಾ.ನಗರ ತಾಲೂಕು ಅಧ್ಯಕ್ಷ ಉಡಿಗಾಲ ಗಿರೀಶ್, ಜಿ. ಪ್ರಕಾಶ್ ಇದ್ದರು.