ಜು.31ರಂದು ಪತ್ರಿಕಾ ದಿನಾಚರಣೆ: ಕಾಗಲಕರ್ ಪ್ರಶಸ್ತಿಗೆ ಶಿವಲಿಂಗಪ್ಪ, ದಿ.ಜಯತೀರ್ಥ ಭಾಜನ :20 ಪತ್ರಕರ್ತರಿಗೆ ಸಂಘದ ವಾರ್ಷಿಕ ಪ್ರಶಸ್ತಿ ಘೋಷಣೆ

ಕಲಬುರಗಿ,ಜು 28: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2023ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಇದೇ 31ರಂದು ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿರುವ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2023ನೇ ಸಾಲಿನ ವಿ.ಎನ್.ಕಾಗಲಕರ್ ಪ್ರಶಸ್ತಿಗೆ ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಸಂಧ್ಯಾಕಾಲ ಪತ್ರಿಕೆಯ ಸಂಪಾದಕ ಡಿ.ಶಿವಲಿಂಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು ದಿ.ಜಯತೀರ್ಥ ಕಾಗಲಕರ್ ಅವರಿಗೆ ಮರಣೋತ್ತರವಾಗಿಯೂ ವಿ.ಎನ್.ಕಾಗಲಕರ್ ಪ್ರಶಸ್ತಿ ಘೋಷಿಸಲಾಗಿದೆ ಎಂದು ಯಡ್ರಾಮಿ ಹೇಳಿದರು.
ಇದರ ಜೊತೆಗೆ, ವಿವಿಧ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 20 ಪತ್ರಕರ್ತರಿಗೆ ಸಂಘದ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ವಿವರಿಸಿದರು.
ರ್ಷಿಕ ಪ್ರಶಸ್ತಿ ವಿಜೇತರು:
ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ಉಪಸಂಪಾದಕ ರಾಘವೇಂದ್ರ ದೇಸಾಯಿ, ಸಂಜೆವಾಣಿ ಹಿರಿಯ ವರದಿಗಾರ ಮಹೇಶ್ ಕುಲಕರ್ಣಿ, ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ಡಾ.ವೆಂಕಟೇಶ್ ಏಗನೂರ್, ವಿಜಯ ಕರ್ನಾಟಕ ಚಿತ್ತಾಪುರ ವರದಿಗಾರ ಕಾಶಿನಾಥ ಗುತ್ತೇದಾರ್, ವಿಜಯವಾಣಿ ಹಿರಿಯ ಉಪಸಂಪಾದಕ ಚನ್ನಬಸಯ್ಯ ಗುರುವಿನ, ಸಂಯುಕ್ತ ಕರ್ನಾಟಕ ಫರಹತಾಬಾದ್ ವಲಯ ವರದಿಗಾರ ಗುರುಬಸಪ್ಪ ಸಜ್ಜನಶೆಟ್ಟಿ, ಶಾಸನ ಪತ್ರಿಕೆಯ ಹಿರಿಯ ಉಪಸಂಪಾದಕ ಸತೀಶ್ ಜೇವರ್ಗಿ, ಸತ್ಯಕಾಮ ಪತ್ರಿಕೆಯ ಸಂಪಾದಕ ಆನಂದ ಮಣೂರ್, ದಿಗ್ವಿಜಯ ನ್ಯೂಸ್ ಚಾನಲ್ ವರದಿಗಾರ ಓಂಪ್ರಕಾಶ್ ಮುನ್ನೂರ್, ಫ್ಯಾಷನ್ ಪೀಪಲ್ ಪತ್ರಿಕೆಯ ಸಂಪಾದಕ ಮಲ್ಲಿಕಾರ್ಜುನ ವಿ.ಎನ್., ಪಬ್ಲಿಕ್ ಟಿವಿ ಕ್ಯಾಮರಾಮ್ಯಾನ್ ಮನೀಷ್ ಪವಾರ್, ವಿಜಯವಾಣಿ ಕಮಲಾಪುರ ವರದಿಗಾರ ಸುರೇಶ್ ಲೇಂಗಟಿ, ಕನ್ನಡಬಂಧು ಸಂಪಾದಕ ಗುರುರಾಜ ಕುಲಕರ್ಣಿ, ವಿಜಯ ಗುಲ್ಬರ್ಗ ಪತ್ರಿಕೆಯ ಸಂಪಾದಕ ಬಾಲಾಜಿ ಚಿತ್ತೇಕರ್, ಕನ್ನಡಪ್ರಭ ಛಾಯಾಗ್ರಾಹಕ ಸುನಿಲ್ ರೆಡ್ಡಿ ಉದನೂರ್, ನೃಪತುಂಗ ಅಫಜಲಪುರ ತಾಲೂಕು ವರದಿಗಾರ ಅಶೋಕ್ ಕಲ್ಲೂರ್, ವಿಜಯ ಕರ್ನಾಟಕ ಅಫಜಲಪುರ ತಾಲೂಕು ವರದಿಗಾರ ಶಕೀಲ್ ಚೌಧರಿ, ಉದಯಕಾಲ ಸೇಡಂ ವರದಿಗಾರ ರಾಧಾಕೃಷ್ಣ ಕೆ., ಇನ್ಕ್ವಿಲಾಬ್-ಎ-ಡೆಕ್ಕನ್ ಪತ್ರಿಕೆಯ ಛಾಯಾಗ್ರಾಹಕ ಮುಜೀಬ್ ಅಲಿಖಾನ್ ಹಾಗೂ ಉದಯವಾಣಿ ಜೇವರ್ಗಿ ವರದಿಗಾರ ಪ್ರಸನ್ನ (ಪುನೀತ್) ಕುಲಕರ್ಣಿ ಅವರನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬಾಬುರಾವ್ ಯಡ್ರಾಮಿ ಮಾಹಿತಿ ನೀಡಿದರು.
ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಶಿವರಂಜನ ಸತ್ಯಂಪೇಟೆ, ಜಿಲ್ಲಾ ಉಪಾಧ್ಯಕ್ಷರಾದ ಸುರೇಶ್ ಬಡಿಗೇರ, ರಾಮಕೃಷ್ಣ ಬಡಶೇಷಿ, ದೇವೇಂದ್ರಪ್ಪ ಅವಂಟಿ, ಮಲ್ಲಿಕಾರ್ಜುನ ಜೋಗ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾವ್ ಉಪಸ್ಥಿತರಿದ್ದರು.


ಜು.31ರಂದು ಪತ್ರಿಕಾ ದಿನಾಚರಣೆ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇದೇ 31ರಂದು ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ತಿಳಿಸಿದರು.ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ ಅಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯತಿ ಸಿಇಒ ಭವರ್ ಸಿಂಗ್ ಮೀನಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ನಿರ್ದೇಶಕ ಸಿದ್ದೇಶ್ವರ, ಕಲಬುರಗಿ ಪೆÇಲೀಸ್ ಕಮಿಷನರ್ ಚೇತನ್ ಆರ್., ಎಸ್ಪಿ ಇಶಾ ಪಂತ್, ಯುನೈಟೆಡ್ ಆಸ್ಪತ್ರೆಯ ಮುಖ್ಯಸ್ಥ ಡಾ.ವಿಕ್ರಂ ಸಿದ್ಧಾರೆಡ್ಡಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಡಾ.ಶಿವರಂಜನ ಸತ್ಯಂಪೇಟೆ ಪಾಲ್ಗೊಳ್ಳಲಿದ್ದು, ಸಂಘದ ಜಿಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.