ಜು.31ರಂದು ದಣಿವರಿಯದ ಹೋರಾಟಗಾರ ಪುಸ್ತಕ ಬಿಡುಗಡೆ

ಕಲಬುರಗಿ,ಜು.29- ನ್ಯಾಯವಾದಿ ಹಣಮಂತರಾಯ ಅಟ್ಟೂರರವರ ಬದುಕಿಗೆ 50 ವರ್ಷ ಹಾಗೂ ಸಮಾಜ ಸೇವೆಗೆ 25 ವರ್ಷದ ನಿಮಿತ್ಯವಾಗಿ ನಿರಂತರವಾಗಿ 25 ವರ್ಷಗಳಿಂದ ಸಾಮಾಜಿಕ, ಸಾಂಸ್ಕøತಿಕ ಹಾಗೂ ಹೋರಾಟದ ಸವಿನೆನಪಿಗಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ವಾಸುದೇವ ಸೇಡಂ ಅವರು ಅಟ್ಟೂರ ಅವರ ಕುರಿತು ಸಮಗ್ರವಾಗಿ ಚಿತ್ರ ಸಹಿತರಾಗಿ ‘`ದಣಿವರಿಯದ ಹೋರಾಟಗಾರ” ಹಣಮಂತರಾಯ ಅಟ್ಟೂರ ಎಂಬ ಪುಸ್ತಕ ರಚಿಲಾಗಿದ್ದು, ಈ ಪುಸ್ತಕದ ಬಿಡುಗಡೆ ಸಮಾರಂಭ ಜು.31ರ ಬೆಳಿಗ್ಗೆ 11-30ಕ್ಕೆ ನಗರದ ಹಳೆ ಆರ್‍ಟಿಓ ರಸ್ತೆ ಶ್ರೀವಿಜಯಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಜರುಗಲಿದ್ದು,ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಗಂಗಾವತಿ ಮತ್ತು ಮಾಜಿ ಶಾಸಕರಾದ ಬಿ.ಆರ್.ಪಾಟೀಲ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಎಂದು ಸಹೃದಯ ಗೆಳೆಯರ ಬಳಗ ಹೇಳಿದೆ.
ಅಟ್ಟೂರರು 1997ರಿಂದ ಎ.ಐ.ಎಸ್.ಎಫ್. ಹಾಗೂ ವಿವಿಧ ಸಂಘಟನೆಯಲ್ಲಿದ್ದು ಹಳ್ಳಿಯಿಂದ ದಿಲ್ಲಿಯವರೆಗೆ ಎನ್ನುವ ಹಾಗೆ ವಿದ್ಯಾರ್ಥಿ, ಯುವಕರ, ರೈತ ಕಾರ್ಮಿಕರ ಚಳುವಳಿ ರೂಪಿಸಿ ಹೋರಾಟ ಮಾಡಿ ನ್ಯಾಯ ದೊರಕಿಸಿ ಕೊಡಿಸುವಲ್ಲಿ ಪ್ರಮೂಖ ಪಾತ್ರ ವಹಿಸಿದ್ದಾರೆ. ಮುಖ್ಯ ಹೋರಾಟಗಳಾದ 1997ರಲ್ಲಿ ಚಿತ್ರಕಲಾ ಶಿಕ್ಷಕರ ನೇಮಕಾತಿಗಾಗಿ ಚಳುವಳಿ ರೂಪಿಸಿ ನೇಮಕಾತಿ ಮಾಡಿಸಿರುವುದು ಹಾಗೂ 2005ರಲ್ಲಿ ಕೆ.ಪಿ.ಟಿ.ಸಿ.ಎಲ್. ನಲ್ಲಿ ಎ.ಟಿ.ಸಿ. ತರಬೇತಿದಾರರ ನೇರ ನೇಮಕಾತಿ ಯಾಗಬೇಕೆಂದು ಹಲವಾರು ವರ್ಷ ಉಗ್ರವಾದ ಹೋರಾಟ ಮಾಡಿ ಇದರ ಪ್ರತಿಫಲವಾಗಿ 2200 ಜನರನ್ನು ನೇಮಕಾತಿ ಮಾಡಿಸುವಲ್ಲಿ ಅಟ್ಟೂರರ ಪಾತ್ರ ಮಹತ್ವವಾಗಿದೆ.
ಇದರ ಜೊತೆಗೆ ವಕೀಲ ವೃತ್ತಿಯೊಂದಿಗೆ ಕಲಬುರಗಿಯಲ್ಲಿ ಉಚ್ಚ ನ್ಯಾಯಾಲಯ ಸ್ಥಾಪನೆ, ಕರ್ನಾಟಕ ಆಡಳಿತಾತ್ಮಕ ಟ್ರೆಬ್ಯುನಲ್ (ಕೆ.ಎ.ಟಿ.) ಸ್ಥಾಪಿಸಬೇಕೆಂಬ ಯಶಸ್ವಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಅಲ್ಲದೆ ಪ್ರತಿ ವರ್ಷ ನೂರಾರು ಜನರಿಗೆ ಪ್ರಶಸ್ತಿ ನೀಡಿ ಈ ಭಾಗದ ಗೌರವ ಹೆಚ್ಚಿಸುವ ಕಾರ್ಯ ಮಾಡುತ್ತಿದ್ದಾರೆ. ಮೋಡದಲ್ಲಿ ಮಿನುಗುವ ನಕ್ಷತ್ರ'',ಬಸವಾಮೃತ”, ಕಲ್ಯಾಣ ರತ್ನ'' ಹಾಗೂ ವಿದ್ಯಾರ್ಥಿಗಳಿಗೆಅಂಕವೀರ” ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಅಲ್ಲದೆ ನಿರಂತರವಾಗಿ ರೈತ-ಕಾರ್ಮಿಕರ ಹಲವಾರು ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಸೇವೆ ಕೈಗೊಂಡಿದ್ದಾರೆ ಹಲವಾರು ಬಾರಿ ಬೆಂಗಳೂರು ಚಲೋ'',ದೆಹಲಿ ಚಲೋ” ಈ ಹೋರಾಟಗಳಲ್ಲಿ ಕೂಡಾ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿ ನಾಯಕರಾಗಿದ್ದಾರೆ.
25 ವರ್ಷ ಸಾಮಾಜಿಕ ಸೇವೆ ಹಾಗೂ ಹೋರಾಟದ ವಿವರವಾದ ದಾಖಲೆಗಳು ಇರಲಿ ಎಂಬ ಸದೀಚ್ಛೆಯಿಂದ ಈ ಪುಸ್ತಕವನ್ನು ಗೆಳೆಯರ ಬಳಗ ಸೇರಿಕೊಂಡು ಹೊರತರುತ್ತಿದೆ ಎಂದು ಡಾ. ವಾಸುದೇವ ಸೇಡಂ, ಪ್ರಭುದೇವ ಯಳಸಂಗಿ, ಸಂಜೀವಕುಮಾರಶೆಟ್ಟಿ, ಮಲಕಾರಿ ಪೂಜಾರಿ, ರವಿಕುಮಾರ ಶಹಾಪೂರಕರ ಶ್ರವಣಕುಮಾರ ಮಠ, ಅಂಬಾರಾಯ ಕಣ್ಣಿ, ರಘುನಂದನ ಕುಲಕರ್ಣಿ ಅವರು ತಿಳಿಸಿದ್ದಾರೆ.