
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.26: ತಾಲೂಕಿನ ಮೋಕಾ ಗ್ರಾಮದ ಸುಪ್ರಸಿದ್ಧ ‘ಶ್ರೀ ಮರೂರು ಅಭಯ ಆಂಜನೇಯ ಸ್ವಾಮಿಯ 7 ನೇ ವರ್ಷದ ಹನುಮ ಮಾಲೆ ಅ. 20 ರಂದು ಹಮ್ಮಿಕೊಂಡಿದೆಂದು ಹನುಮ ಮಾಲೆಯ ಸ್ವಾಗತ ಸಮಿತಿಯ ಅನಿಲ್ ಕುಮಾರ್ ನಾಯ್ಡು ಮೋಕ ತಿಳಿಸಿದ್ದಾರೆ.
ಈ ದೇವಸ್ಥಾನವು ಅಪಾರ ಸ್ಥಳ ಮಹಿಮೆಯನ್ನು ಹೊಂದಿದೆ. ಇಲ್ಲಿನ ಹನುಮನು ಕರುಣಾಮಯಿ, ಕಲ್ಮಶ ರಹಿತ ಭಕ್ತಿಗೆ ಒಲಿಯುವವನು, ಭಕ್ತರ ಆಶೋತ್ತರಗಳಿಗೆ ಅಭಯದಾತನಾಗಿದ್ದಾನೆ.
ವರ್ಷದಿಂದ ವರ್ಷಕ್ಕೆ ಪಾಲ್ಗೊಳ್ಳುತ್ತಿರುವ ಭಕ್ತರ ಸಂಖ್ಯೆಯಲ್ಲಿ ವೃದ್ಧಿಯಾಗುತ್ತಿರುವುದು, ಭಕ್ತರಲ್ಲಿ ಸ್ಥಳ ಮಹಿಮೆಯ ಬಗ್ಗೆ ಇರುವ ಶ್ರದ್ಧೆಯ ಪ್ರತೀಕವಾಗಿದೆ. ಈ ದೇವಸ್ಥಾನದಲ್ಲಿ ಮುಂಬರುವ ಶ್ರಾವಣ ಮಾಸದಲ್ಲಿ ಜುಲೈ 30 ಶನಿವಾರದಿಂದ ಆರಂಭಗೊಂಡು ಆ 20 ಶ್ರಾವಣದ ಕೊನೆ ಶನಿವಾರದ ವರೆಗೆ ನಡೆಯಲಿದೆ.
ಏಳನೇ ವರ್ಷದ ಹನುಮ ಮಾಲಾ ದೀಕ್ಷಾ ಧಾರಣ ಹಾಗೂ ಮತ್ತು ಎರಡನೇ ವರ್ಷದ ಉಚಿತ ಸಾಮೂಹಿಕ ವಿವಾಹದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರ ಸದುಪಯೋಗವನ್ನು ಸದ್ಭಕ್ತರು ಮಾಡಿಕೊಂಡು ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಸ್ವಾಗತ ಸಮಿತಿ ಸಾರ್ವಜನಿಕರನ್ನು ವಿನಂತಿಸಿಕೊಂಡಿದೆ.
ಜುಲೈ 30 ರಂದು ಹನುಮ ಮಾಲಾ ದೀಕ್ಷೆ ಪ್ರಾರಂಭವಾಗಲಿದ್ದು, ಆ 5,7,9,11,16 ಮತ್ತು 21 ದಿನಗಳ ವರೆಗೆ ಮಾಲೆ ಧರಿಸಲು ನಿಶ್ಚಯಿಸಲಾಗಿದೆ.
ಮಾಲಾಧಾರಿಗಳಾಗುವವರು ಕಾಯಾ ವಾಚಾ ಮನಸಾ ಶುದ್ಧರಾಗಿ ಪಾಲ್ಗೊಳ್ಳುವಂತೆ ಸೂಚಿಸಿದೆ. ಆ 19 ಶುಕ್ರವಾರ ಸಂಜೆ ಇರುಮುಡಿ ಸಮರ್ಪಣೆ ಮತ್ತು ಆ20 ಶನಿವಾರದಂದು ಹೋಮ ಮತ್ತು ಪೂರ್ಣಾಹುತಿ ನಡೆಯುತ್ತದೆ. ಅಂದು ಬೆಳಿಗ್ಗೆ 11 ನೂತನ ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದೆ.
ಆ 12 ಶುಕ್ರವಾರ ಸಂಜೆ ಬಳ್ಳಾರಿ ನಗರದಲ್ಲಿ ಬೈಕ್ ರಾಲಿಯನ್ನು ನಡೆಸಲಾಗುವುದು ಮತ್ತು ಬೈಕ್ ಱ್ಯಾಲಿಯು ನಗರ ದೇವತೆ ದುರ್ಗಮ್ಮ ದೇವಸ್ಥಾನದಿಂದ ಪ್ರಾರಂಭವಾಗಲಿದೆ. ಹನುಮ ಮಾಲಾ ಧೀಕ್ಷೆ, ಬೈಕ್ ಱ್ಯಾಲಿ ಮತ್ತು ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗಾಗಿ 9741111122, 7676907172, 9632059744,8660867986 8310062526,9538757545
ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕೋರಿದೆ.
Attachments area