ಜು. 29ರಂದು ಶ್ರೀ ಶಿವಲಿಂಗೇಶ್ವರರ ಮಹಾಪುರಾಣ ಪ್ರಾರಂಭ: ಶ್ರೀಗಳಿಗೆ ಆಮಂತ್ರಣ

ಕಲಬುರಗಿ,ಜು.20: ನಗರದ ವಿದ್ಯಾನಗರ ಕಾಲೋನಿಯ ಬಸವೇಶ್ವರ್ ಆಸ್ಪತ್ರೆ ಎದುರುಗಡೆ ಇರುವ ವೆಲ್‍ಫೇರ್ ಸೊಸೈಟಿಯ ಸಮುದಾಯ ಭವನದಲ್ಲಿ ಜುಲೈ 29ರಂದು ಶುಕ್ರವಾರ ಶ್ರಾವಣ ಮಾಸದ ನಿಮಿತ್ಯ ನಿತ್ಯ ಸಂಜೆ 6-30ರಿಂದ 8 ಗಂಟೆಯವರೆಗೆ ಒಂದು ತಿಂಗಳವರೆಗೆ ಶ್ರೀ ಶಿವಲಿಂಗೇಶ್ವರರ ಮಹಾಪುರಾಣ ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿಯ ಕಾರ್ಯದರ್ಶಿ ಶಿವರಾಜ್ ಅಂಡಗಿ ಅವರು ತಿಳಿಸಿದ್ದಾರೆ.
ತಾಲ್ಲೂಕಿನ ಹಿರೇಸಾವಳಗಿಯ ಶ್ರೀ ಶಿವಲಿಂಗೇಶ್ವರ್ ಸಂಸ್ಥಾನ ಮಠದ ಗುರುನಾಥ್ ಮಹಾಸ್ವಾಮಿಗಳಿಗೆ ಪುರಾಣ ಉದ್ಘಾಟನಾ ಕಾರ್ಯಕ್ರಮದ ನೇತೃತ್ವ ವಹಿಸಲು ಆಮಂತ್ರಣ ಕೊಟ್ಟು ಸನ್ಮಾನಿಸಲಾಯಿತು ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಪುರಾಣದ ಸಂಕ್ಷಿಪ್ತ ಮಾಹಿತಿ: ನಮ್ಮ ದೇಶವು ಮಹಾಪುರುಷರನೇಕರಿಗೆ ಜನ್ಮ ಭೂಮಿಯಾಗಿದೆ, ಜಗದ್ವಿಖ್ಯಾತ ಧರ್ಮದ ಬೋಧಕರಿಗೆ, ತತ್ವಜ್ಞರಿಗೂ, ಅನುಭವಿಗಳಿಗೂ ಈ ಪವಿತ್ರ ಭೂಮಿಯಲ್ಲಿ ಉದಯಿಸಿ ಮಾನವ ಜನಾಂಗದ ಉದ್ದಾರ ಮಾಡಿರುವ ಅನೇಕ ಪೂಜ್ಯರಲ್ಲಿ ಹಿರೇಸಾವಳಗಿಯ ಶಿವಲಿಂಗೇಶ್ವರ್ ಮಹಾಸ್ವಾಮಿಗಳು ಒಬ್ಬರು. ಕೊಳ್ಳೂರು ಗ್ರಾಮದ ಹಿರೇಗೌಡರ ವಂಶದಲ್ಲಿ ತಂದೆ ಲಿಂಗಬಸಪ್ಪ, ತಾಯಿ ಮಲ್ಲಮ್ಮ ಅವರ ಉದರದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲಿ ತಮ್ಮ ಮಹಾಮಹಿಮೆಗಳನ್ನು ತೋರಿಸುತಾ ್ತಮಹಮ್ಮದೀಯ ಧರ್ಮದ ಸತ್ಮುರುಷನಾದ ಬಂದೇ ನವಾಜರಿಗೆ ತಮ್ಮ ಲೀಲೆ ತೋರಿಸಿ ಮುಂದೆ ಹಿಂದೂ ಮುಸಲ್ಮಾನರು ಈ ಇಬ್ಬರು ಭಿನ್ನಧರ್ಮದ ಸತ್ಪುರುಷರು ಭಕ್ತಿ ಗೌರವಗಳಿಂದ ಕಾಣುತ್ತಿದ್ದರು.
ಪೂಜ್ಯರು ಲೋಕೋದ್ದಾರಕ್ಕಾಗಿ ಜನರನ್ನು ಪೋಷಿಸುತ್ತಾ, ದೀನರನ್ನು ಉದ್ದರಿಸುತ್ತಾ, ಜನರ ವ್ಯಾದಿ ಮೊದಲಾದ ಭವಣೆಗಳನ್ನು ನಿವಾರಿಸುತ್ತಾ ಪವಾಡಗಳು ಮಾಡುತ್ತಾ 360ಕ್ಕೂ ಹೆಚ್ಚು ದಾಸೋಹ ಮಠಗಳನ್ನು ಸ್ಥಾಪಿಸಿದ ಕೀರ್ತಿ ಅವರದು.
ವಿಶೇಷವಾಗಿ ಕಲಬುರ್ಗಿಯ ಬಂದೇನವಾಜರು ಪೂಜ್ಯರ ಭೇಟಿಗೆ ಹುಲಿಯ ಮೇಲೆ ಬಂದ ಸಮಯದಲ್ಲಿ ಪೂಜ್ಯರು ತಾವು ಕುಳಿತಿದ್ದ ಕಟ್ಟೆಯ ಸಮೇತ ಚಲಿಸುತಾ ್ತಅವರಿಗೆ ಸ್ವಾಗತಿಸಿದ್ದು ಆಶ್ಚರ್ಯಕರ ಪವಾಡಕ್ಕೆ ಬಂದೇನವಾಜರು ಶರಣರಾಗಿದ್ದು, ತುಂಬಿದ ಕೃಷ್ಣಾ ನದಿಯ ನೀರಿನ ಮೇಲೆ ನಡೆದದ್ದು, ಹುಲಿ ಹಾಗೂ ಆಕಳಿಗೆ ಒಂದೇ ಮಂಥಣಿಯಲ್ಲಿ ನೀರು ಕುಡಿಸಿದ್ದು, ಬಾಲಖೇಡದಲ್ಲಿ ದಿಲ್ಲಿಯ ಬಾದ್‍ಷಾನಿಗೆ ಲಿಂಗ ಲೀಲೆ ತೋರಿಸಿದ್ದು, ಮಾಂಸದಡಿಗೆಗೆ ಮಲ್ಲಿಗೆ ಮಾಡಿದ್ದು, ಹೀಗೆ ಅನೇಕ ಪವಾಡಗೈದು ಕೊನೆಯಲ್ಲಿ ತಮ್ಮ ದೇಹವನ್ನು 3 ವಿಭೂತಿಗಟ್ಟೆ ಮತ್ತು ಫತ್ರಿಯಾಗಿ ಭಕ್ತರಿಗೆ ಬಿಟ್ಟು ಹೋದ ಮರಣವನ್ನೆ ಗೆದ್ದು ಮೃತ್ಯುಂಜಯರು. ಅಂತಹ ಪವಾಡ ಪುರುಷ ಶಿವಲಿಂಗೇಶ್ವರರ ಪುರಾಣ ಪ್ರವಚನ ಕೇಳುವುದೇ ನಮ್ಮ ನಿಮ್ಮೆಲ್ಲರ ಭಾಗ್ಯ ಎಂದು ಅಂಡಗಿ ಅವರು ಹೇಳಿದ್ದಾರೆ.
ಶ್ರೀಗಳಿಗೆ ಆಮಂತ್ರಿಸುವ ಸಂದರ್ಭದಲ್ಲಿ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ್ ದೇಶಮುಖ್, ಕಾರ್ಯದರ್ಶಿ ಶಿವರಾಜ್ ಅಂಡಗಿ, ಗಣ್ಯರಾದ ಬಸವಂತರಾವ್ ಜಾಬಶೆಟ್ಟಿ, ವಿಶ್ವನಾಥ್ ರಟಕಲ್, ಶಂಭುಲಿಂಗ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.