ಜು. 27 ಮತ್ತು 28ರಂದು ನಡೆಯಲಿರುವ ಸಾಂಸ್ಕøತಿಕ ಮತ್ತು ಜನಪದ ಉತ್ಸವಸಮಾರಂಭದಲ್ಲಿ ಕಲ್ಯಾಣ ಕರ್ನಾಟಕದ 38 ಕಲಾವಿದರಿಗೆ ಕಲಾರತ್ನ ಪ್ರಶಸ್ತಿ ಪ್ರದಾನ

ಬೀದರ್ ಜು. 25:ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಪ್ರಥಮ ವರ್ಷಾಚರಣೆ ಹಾಗೂ ಸಾಂಸ್ಕøತಿಕ ಮತ್ತು ಜನಪದ ಉತ್ಸವ ಜುಲೈ. 27 ಮತ್ತು 28ರಂದು ಬೀದರ್‍ನ ಪೂಜ್ಯ ಚನ್ನಬಸವ ಪಟ್ಟದ್ದೇವರ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ವಿಜಯಕುಮಾರ ಸೋನಾರೆ ತಿಳಿಸಿದರು.

ಅವರು ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘ ಕಲಬುರಗಿಯ ಸಹಯೋಗದಲ್ಲಿ ಹಾಗೂ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾ„ಕಾರ ಬೆಂಗಳೂರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಕಾರದೊಂದಿಗೆ ಜು. 27ರಂದು ಬೆಳಿಗ್ಗೆ 8.30 ಗಂಟೆಗೆ ವಿವಿಧ ಕಲಾ ತಂಡಗಳ ಭವ್ಯ ಮೆರವಣಿಗೆಯು ಡಾ. ಅಂಬೇಡ್ಕರ್ ವೃತ್ತದಿಂದ ರಂಗ ಮಂದಿರ ವರೆಗೆ ನೆಡಯಲಿದ್ದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಉದ್ಘಾಟಿಸುವರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರಬಾಬು, ವಿವಿಧ ಅಧಿಕಾರಿಗಳು, ಸಮಾಜದ ಪ್ರಮುಖರು ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಜನಪ್ರತಿನಿ„ಗಳು

ಭಾಗವಹಿಸುವರು.

ಅಂದು ಬೆಳಿಗ್ಗೆ 10-30ಕ್ಕೆ ರಂಗ ಮಂದಿರದಲ್ಲಿ ನಡೆಯಲಿರುವ ಕಲ್ಯಾಣ ಕರ್ನಾಟಕ ಸಾಂಸ್ಕøತಿಕ ಮತ್ತು ಜನಪದ ಉತ್ಸವವದ ಸಾನಿಧ್ಯವನ್ನು ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಡಾ. ಶಿವಾನಂದ ಸ್ವಾಮಿಗಳು ಹಾಗೂ ಕೌಠಾದ ಡಾ. ಸಿದ್ರಾಮೇಶ್ವರ ಶರಣ ಬೆಲ್ದಾಳರು ವಹಿಸುವರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ವಿ. ಸುನೀಲಕುಮಾರ ಉದ್ಘಾಟಿಸುವರು.

ಮುಖ್ಯ ಅತಿಥಿಯಾಗಿ ಕೇಂದ್ರ ಸಚಿವ ಭಗವಂತ ಖೂಬಾ, ವಿಧಾನ ಪರಿಷತ್ ಸಭಾಪತಿ ರಘುನಾಥರಾವ ಮಲ್ಕಾಪೂರೆ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬಿ. ಪಾಟೀಲ್ ಮುನೇನಕೊಪ್ಪ, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಭಾಗ ವಹಿಸುವರು. ಶಾಸಕ ರಹೀಮ್‍ಖಾನ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಅವರ ಗೌರವ ಅಭಿನಂದನೆ ನಡೆಯಲಿದೆ.

ಅತಿಥಿಯಾಗಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾ„ಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ, ಕೆಎಸ್‍ಐಐಡಿಸಿ ಅಧ್ಯಕ್ಷ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಬಿ. ಪಾಟೀಲ್, ಬಂಡೆಪ್ಪ ಖಾಶೆಂಪೂರ, ಶರಣು ಸಲಗರ, ಬುಡಾ ಅಧ್ಯಕ್ಷ ಬಾಬು ವಾಲಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘ ಕಲಬುರಗಿಯ ಲೀಲಾ ಕಾರಟಗಿ, ಸಂಘದ ನಿರ್ದೇಶಕರಾದ ರೇವಣಸಿದ್ದಪ್ಪ ಜಲಾದೆ, ಗುರುಪಾದಪ್ಪ ನಾಗಮಾರಪಳ್ಳಿ -ಫೌಂಡೇಶನ್ ಅಧ್ಯಕ್ಷರಾದ ಸೂರ್ಯಕಾಂತ ನಾಗಮಾರಪಳ್ಳಿ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ. ಕಪ್ಪಣ್ಣ ಭಾಗವಹಿಸುವರು.

ಉದ್ಘಾಟನಾ ಸಾಮರಂಭದ ನಂತರ 38 ಜನರಿಗೆ ಕಲ್ಯಾಣ ಕರ್ನಾಟಕ ಕಲಾರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಮಧ್ಯಾಹ್ನ 3.30ಕ್ಕೆ ಕಲಾ ತಂಡಗಳ ವೇದಿಕೆ ಪ್ರದರ್ಶನವನ್ನು ಬಿ. ಟಾಕಪ್ಪ ಕಣ್ಣೂರ ಉದ್ಘಾಟಿಸುವರು. ವಿವಿಧ ಪ್ರಮುಖರು ಭಾಗವಹಿಸುವರು. ಸಂಜೆ 7 ಗಂಟೆಗೆ ನಾಟಕ ಪ್ರದರ್ಶನ ನಡೆಯಲಿದ್ದು ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿ ಉದ್ಘಾಟಿಸುವರು. ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸುವರು.

ಜುಲೈ 28ರಂದು ಬೆಳಿಗ್ಗೆ 10ರಿಂದ 11ರ ವರೆಗೆ ಗೋಷ್ಠಿ-1 ನಡೆಯಲಿದ್ದು ಶ್ರಿನಿವಾಸ ಜಿ. ಕಪ್ಪಣ್ಣ ಉದ್ಘಾಟಿಸುವರು. ಮಾತಾ ಮಂಜಮ್ಮ ಜೋಗತಿ ಅಧ್ಯಕ್ಷತೆ ವಹಿಸುವರು. ಬೆಳಿಗ್ಗೆ 11.15ರಿಂದ 12.15ರ ವರೆಗೆ ಗೋಷ್ಠಿ-2 ನಡೆಯಲಿದ್ದು ಪಿಚ್ಚಳ್ಳಿ ಶ್ರಿನಿವಾಸ ಆಶಯ ನುಡಿಗಳನ್ನಾಡುವರು. ಮಧ್ಯಾಹ್ನ 12-30ರಿಂದ 1.30ರ ವರೆಗೆ ಗೋಷ್ಠಿ-3 ನಡೆಯಲಿದ್ದು ಡಾ. ಸಿದ್ರಾಮಪ್ಪ ಮಾಸಿಮಾಡೆ ಆಶಯ ನುಡಿಗಳನ್ನಾಡುವರು.

ಮಧ್ಯಾಹ್ನ 3ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಕನ್ನಡ ಅಭಿವೃದ್ಧಿ ಪ್ರಾ„ಕಾರದ ಮಾಜಿ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಸಮಾರೋಪ ಭಾಷಣ ಮಾಡುವರು. ನಂತರ ವಿಶೇಷ ಸನ್ಮಾನ, ನಾಟಕ ಪ್ರದರ್ಶನ ಜರುಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಡಿಂಗ್ರಿ ನರೇಶ, ಸಹ ಕಾರ್ಯದರ್ಶಿ, ಅಮರೇಶ ಹಸ್ಮಕಲ್, ಸದಸ್ಯರಾದ ಸುನೀಲ ಕಡ್ಡೆ, ಔರಾದ ತಾಲೂಕು ಅಧ್ಯಕ್ಷ ಸಂಗಮೇಶ ಬೆಲ್ದಾಳ, ಏಸುದಾಸ ಅಲಿಯಂಬುರೆ, ಶರಣು ಗೌಳಿ ಉಪಸ್ಥಿತರಿದ್ದರು.