ಜು. 22ರಂದು “ಆಯುಕ್ತರ ನಡೆ ವಾರ್ಡ್ ಕಡೆ” ಕಾರ್ಯಕ್ರಮ

ಕಲಬುರಗಿ,ಜು.21:ಕಲಬುರಗಿ ನಗರದ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲು “ಆಯುಕ್ತರ ನಡೆ ವಾರ್ಡ್ ಕಡೆ” ಕಾರ್ಯಕ್ರಮವನ್ನು ಜುಲೈ 22 ರಂದು ಶುಕ್ರವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಹಾನಗರಪಾಲಿಕೆ ವ್ಯಾಪ್ತಿಯ ವಾರ್ಡ್ ನಂ. 1ರಲ್ಲಿ ಬರುವ ಕಲಬುರಗಿ ತಾಜ್ ನಗರದ ಸರ್ಕಾರಿ ಉರ್ದು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸದರಿ ವಾರ್ಡಕ್ಕೆ ಸಂಬಂಧಪಟ್ಟ ಸಾರ್ವಜನಿಕರು ಮೇಲ್ಕಂಡ ದಿನದಂದು ನಡೆಯುವ ಕಾರ್ಯಕ್ರಮಕ್ಕೆ ಹಾಜರಾಗಿ ತಮ್ಮ ಕುಂದುಕೊರತೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರಾದ ಭುವನೇಶ ದೇವಿದಾಸ ಪಾಟೀಲ ಅವರು ತಿಳಿಸಿದ್ದಾರೆ.