ಸಂಜೆವಾಣಿ ವಾರ್ತೆ
ಜಗಳೂರು.ಜು.೧೭: 57 ಕೆರೆ ನೀರು ತುಂಬಿಸುವ ಯೋಜನೆ ವಿಳಂಭಕ್ಕೆ ರಾಜಕಾರಣಿ, ಗುತ್ತಿಗೆದಾರ, ಇಲಾಖೆಯ ಅಧಿಕಾರಿಗಳು ಕಾರಣವಾಗಿದ್ದಾರೆ ಕೆರೆಗಳಿಗೆ ನೀರು ಬರುವವರೆಗೂ ಸುಮ್ಮನೆ ಕೂರುವುದಿಲ್ಲ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.ಪಟ್ಟಣದ ಮಹಾತ್ಮಾಗಾಂಧಿ ವೃತ್ತದಲ್ಲಿರುವ ಶಾಸಕರ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.ಈ ಸಂಬoಧವಾಗಿ ಲೋಪ ದೋಷಗಳ ಬಗ್ಗೆ ಜುಲೈ 19 ರಂದು ತರಳಬಾಳು ಸಮುದಾಯ ಭವನದಲ್ಲಿ ಸಿರಿಗೆರೆ ಶ್ರೀಗಳಾದ ಡಾ. ಶೀವಮೂರ್ತಿಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್, ನೀರಾವರಿ ನಿಗಮದ ಎಂ.ಡಿ. ಮಲ್ಲಿಕಾರ್ಜುನ ಗುಂಗೆ, ಜಿಲ್ಲಾ ಮಟ್ಟದ ಇಂಜಿಯರ್‌ಗಳು, ಅಧಿಕಾರಿಗಳು, ಆಗಮಿಸಲಿದ್ದಾರೆ ಸಭೆಗೆ ನಾನೇ ಖುದ್ದಾಗಿ ಮಾಜಿ ಶಾಸಕರಾದ ರಾಜೇಶ್, ಎಸ್.ವಿ.ರಾಮಚಂದ್ರರಿಗೆ ಆಹ್ವಾನ ನೀಡಿದ್ದೇನೆ.ಬೆಂಗಳೂರಿನಲ್ಲಿ ಜು. 13 ರಂದು ನಡೆದ ಸದನದಲ್ಲಿ ರಾಜ್ಯಪಾಲರ ಭಾಷಣ ನಂತರ ಮಾತನಾಡಲು ಅವಕಾಶ ನೀಡಿದ್ದರು. ಆ ವೇಳೆ ತಾಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕುರಿತು ಪ್ರಸ್ತಾಪ ಮಾಡಲಾಯಿತು ಎಂದರು.ಜಗಳೂರಿನಲ್ಲಿ 2013ರಲ್ಲಿ ನಡೆದ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿರಿಗೆರೆ ಶ್ರೀಗಳ ಆಶಯದಂತೆ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ತಮ್ಮ ಬಜೆಟ್‌ನಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದರು. ನಂತರ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಸಹಕಾರ ನೀಡಿದ್ದರು. ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಹೆಚ್.ಪಿ.ರಾಜೇಶ್ ತುಂಬಾ ಹೋರಾಟ ಮಾಡಿ ಈ ಹಂತಕ್ಕೆ ಬರಲು ಪ್ರಮುಖ ಕಾರಣರಾಗಿದ್ದಾರೆ ಎಂದರು.ಸದಸ್ಯ ಸಣ್ಣ ಪುಟ್ಟ ಕೆಲಸಗಳು ಪೂರ್ಣಗೊಂಡರೆ ವಾರದೊಳಗೆ ತುಪ್ಪದಹಳ್ಳಿ ಕೆರೆ ಜೊತೆಯಲ್ಲಿ ಆಸಗೋಡು, ಕಾಟೇನಹಳ್ಳಿ, ಮಾದನಹಳ್ಳಿ, ಮರಿಕುಂಟೆ, ಗೋಡೆ, ತಾರೆಹಳ್ಳಿ , ಉರಲಕಟ್ಟೆ, ಬಿಳಿಚೋಡು, ಹಾಲೇಕಲ್ಲು , ಚದರಗೋಳ್ಳ ಸೇರಿದಂತೆ 11 ಕೆರೆಗಳಿಗೆ ನೀರು ಹರಿದು ಬರಲಿವೆ ಎಂದರು.ಈ ಸಂಬoಧ ಜುಲೈ 19 ರಂದು ತರಳಬಾಳು ಕಲ್ಯಾಣ ಮಂಟಪದಲ್ಲಿ ನಡೆಯುವ ಸಭೆಗೆ ಮಠದ ಭಕ್ತರು, ತಾಲೂಕಿನ ಜನತೆ , ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಕ್ಷ ಬೇದ , ಜಾತಿ ಬೇಧಮರೆತು ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕು ಎಂದರು.