ಜು. 16 ಹಾಗೂ 17 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ.ಜು.14:ತುರ್ತು ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಕಲಬುರಗಿ ನಗರಕ್ಕೆ ಇದೇ ಜುಲೈ 16 ಹಾಗೂ 17 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಕಲಬುರಗಿ ನಗರದ ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಕೆಯುಡಬ್ಲ್ಯೂಎಸ್‍ಎಂಪಿ, ಕೆಯುಐಡಿಎಫ್‍ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ನಗರಕ್ಕೆ ನೀರು ಸರಬರಾಜು ಮಾಡುವ ಸರಡಗಿಯಲ್ಲಿರುವ ಭೀಮಾ ನದಿಯ ಮತ್ತು ಕೋಟನೂರ ಮಧ್ಯಂತರ ನೀರೇತ್ತುವ ಯಂತ್ರಗಾರ ಪಂಪಿನ ಮನೆಗಳಲ್ಲಿ ಪಂಪಿನ ಮ್ಯಾನಿಫೋಲ್ಡ್ ಕೊಳವೆ ಮಾರ್ಗದಲ್ಲಿ ಅಳವಡಿಸಲಾಗಿರುವ 1200 ಮಿ.ಮೀ./900 ಮಿ.ಮೀ ವ್ಯಾಸದ ಕೊಳವೆ ಮಾರ್ಗದಲ್ಲಿ ಸೋರುವಿಕೆ ಹಾಗೂ ಫರತಾಬಾದ್, ಸಿರನೂರ ಮತ್ತು ಕೇಂದ್ರ ಕಾರಾಗೃಹದ ಹತ್ತಿರ ಹಾಗೂ ಉದನೂರ ರಸ್ತೆಯಲ್ಲಿರುವ ಕೊಳವೆ ಮಾರ್ಗದಲ್ಲಿ ಸೋರುವಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಇದೇ ಜುಲೈ 15 ರಂದು ತುರ್ತು ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.