ಕಲಬುರಗಿ,ಜು.1: ನಗರದ ಬಂಜಾರಾ ಭವನದಲ್ಲಿ ಜುಲೈ 16ರಂದು ಬೆಳಿಗ್ಗೆ 10 ಗಂಟೆಗೆ ಗೋರಸಿಖವಾಡಿ ಗೋರ್ ಸೇನಾ ರಾಷ್ಟ್ರೀಯ ಸಂಘಟನೆ ವತಿಯಿಂದ 2022-2023ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಪದವಿ ಮತ್ತು ಸ್ನಾತಕೊತ್ತರ ಪದವಿಯಲ್ಲಿ ಶೇಕಡಾ 75ಕ್ಕೂ ಹೆಚ್ಚು ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಗೋರ ಗುಣವಂತ ವಿದ್ಯಾರ್ಥಿ ಸತ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಧರ್ ಚವ್ಹಾಣ್ ಅವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಕಾರಕ್ಕಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಹೆಸರು ನೊಂದಾಯಿಸಲು ಶೈಕ್ಷಣಿಕೆ ಅರ್ಹತೆ ಪಡೆದಿರುವ ದಾಖಲೆಗಳ ಸಮೇತ ಸೇನೆಯ ಗೋಪಿಚಂದ್ ಬಾಣೋತ್, ಮೊಬೈಲ್ ನಂಬರ್- 9886065446, ಶ್ರೀಧರ್ ಚವ್ಹಾಣ್ ಅವರ ಮೊಬೈಲ್ ನಂಬರ್ 8088377775 ಸಂಖ್ಯೆಗಳಿಗೆ ಕಲಬರ್ಗಿ ನಗರ, ಗ್ರಾಮೀಣ, ಅಫಜಲಪುರ, ಆಳಂದ್‍ದ್ ಜೇವರ್ಗಿ, ಚಿತ್ತಾಪುರ ತಾಲ್ಲೂಕಿನ ವಿದ್ಯಾರ್ಥಿಗಳು ಜುಲೈ 10ರೊಳಗಾಗಿ ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೋರ್ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರೊ. ಸಂದೇಶ್ ಚವ್ಹಾಣ್, ರಾಜ್ಯಾಧ್ಯಕ್ಷ ಬಾಳಾಸಾಹೇಬ್ ರಾಠೋಡ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗೋಪಿಚಂದ್ ಬಾಣೋತ್, ರವೀಂದ್ರ ರಾಠೋಡ್, ಸುಭಾಷ್ ಚವ್ಹಾಣ್, ಬಾಳಾಸಾಬ್ ರಾಠೋಡ್ ಮುಂತಾದವರು ಉಪಸ್ಥಿತರಿದ್ದರು.