ಜು.15.ರಂದು ರೋಟರಿ ಸಂಸ್ಥೆಯ ಅಧ್ಯಕ್ಷರ ಪದಗ್ರಹಣ ಸಮಾರಂಭ

ಸಂಜೆವಾಣಿ ವಾರ್ತೆ 

ಸೊರಬ.ಜು.14; ರೋಟರಿ ಕ್ಲಬ್ 2023-24 ನೇ ಸಾಲಿನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಜು ,15 ರಂದು   ಪಟ್ಟಣದ ರೇಣುಕಾಂಬ ಸಭಾಂಗಣದಲ್ಲಿ ನಡೆಯಲಿದೆ ಎಂದು  ರೋಟರಿ ಸಂಸ್ಥೆಯ ಅಧ್ಯಕ್ಷ ಮಂಜು ತವನಂದಿ ಹೇಳಿದರು ರೋಟರಿ ಮಂಜು ಹಚ್ ತವನಂದಿ ಇವರಿಂದ ರೋಟರಿ ಡಾ, ನಾಗರಾಜ್ ಇವರಿಗೆ  ಜಿಲ್ಲಾ ನಿಕಟ ಪೂರ್ವ ಗವರ್ನರ್  ರೋ.ಜಿ.ಎನ್.ಪ್ರಕಾಶ್  ಪದವಿ ಪ್ರಧಾನ ಮಾಡಲಿದ್ದಾರೆ ವಿಶೇಷ ಅತಿಥಿಗಳಾಗಿ ಸಾಹಿತಿ ಶಾಂತಿ ಗಂಗಾಧರ ಎಸ್.ಟಿ,ರವಿ ಕೊಟೋಜಿ,ಎ, ಮಹೇಶ್ ಉಪಸ್ಥಿತರಿರಲಿದ್ದಾರೆ ಎಂದರು. ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ ,ಜ್ಞಾನೇಶ್ ಮಾತನಾಡಿ ರೋಟರಿ ಸಂಸ್ಥೆ ಯು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ‌ಸಮಾಜದಲ್ಲಿ ತನ್ನದೇ ಆದ ವಿಶಿಷ್ಟ ಮಹತ್ವವನ್ನು ಉಳಿಸಿಕೊಂಡಿದೆ ಎಂದರು ಪೂರ್ವ ನಿಯೋಜಿತ ಅಧ್ಯಕ್ಷ ಡಾ, ನಾಗರಾಜ್ ಮಾತನಾಡಿ ರೋಟರಿ ಸಂಸ್ಥೆಯ ಧ್ಯೇಯ ಗಳನ್ನ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹಾಗೂ ಜಗತ್ತಿನಲ್ಲಿ ಭರವಸೆಯ ಆಶಾಕಿರಣವನ್ನು ಮೂಡಿಸುವ ಮೂಲಕ ಮೌಲ್ಯಾಧಾರಿತ ಶಿಕ್ಷಣ, ಮಣ್ಣಿನ ಫಲವತ್ತತೆ ಕಾಪಾಡುವ, ಸುರಕ್ಷಿತ ವಾಹನ ಚಾಲನೆ ಅರಿವು,ಈ ತ್ಯಾಜ್ಯ ಬಗ್ಗೆ ಜಾಗೃತಿ ಮೂಡಿಸುವ. ಕಾರ್ಯ ಮಾಡಲಾಗುವುದು ಎಂದರು.ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷರಾದ ನಾಗರಾಜ್ ಗುತ್ತಿ,ರಾಜು ಹಿರಿಯಾವಲಿ, ಕೃಷ್ಣಪ್ಪ ಓಟೂರು ಮಾತನಾಡಿದರು.ರೋಟರಿ ಕಾರ್ಯದರ್ಶಿ ಯಶೋಧರ ರೋಟರಿ ಸದಸ್ಯ ಪುನೀತ್ ಉಪಸ್ಥಿತರಿದ್ದರು.