ಜು.14 ರಂದು ಹಂಪಿಯಲ್ಲಿ ಬಸವಣ್ಣನವರ ಸಂಸ್ಕರಣ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಸಂಡೂರು:ಜು:10:   ಲಿಂಗಾಯತ ಧರ್ಮ ಪುನುರುತ್ಥಾನ ಕೇಂದ್ರ ವಿಶ್ವವಿಖ್ಯಾತ ಹಂಪಿ ಸುಕ್ಷೇತ್ರದಲ್ಲಿ ವಿಶ್ವಗುರು ಬಸವಣ್ಣನವರ ಸಂಸ್ಕರಣ ಕಾರ್ಯಕ್ರಮ ಜು.14ರಂದು ಆಯೋಜಿಸಲಾಗಿದೆ.
ಹಂಪಿ, ಹೊಸಪೇಟೆ, ಬಳ್ಳಾರಿ- ಹಲಕೇರಿ ಪರಮಪೂಜ್ಯ ಶ್ರೀ ಬಸವಲಿಂಗಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಸಂಡೂರಿನ ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪರಮಪೂಜ್ಯ ಶ್ರೀ ಪ್ರಭುಮಹಾಸ್ವಾಮಿಗಳವರ ಅಧ್ಯಕ್ಷತೆಯಲ್ಲಿ ಪೂಜ್ಯ ಬಸವ ಭೂಷಣ ಮಹಾಸ್ವಾಮಿಗಳು ಬಸವ ಮಹಾಮನೆ ಸಿರುಗುಪ್ಪ, ಬಸವರಾಜಪ್ಪ ಶರಣರು, ವೆಂಕಟಾಪುರ ಸಿರುಗುಪ್ಪ ಇವರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಈ ಕಾರ್ಯಕ್ರಮ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗುವುದು ಎಂದು ಲಿಂಗಾಯತ ಧರ್ಮ ಪುನರುತ್ಥಾನ ಕೇಂದ್ರ ಸಮಿತಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಸಮಾರಂಭದಲ್ಲಿ ಬಸವತತ್ವ ಚಿಂತಕರು ಬಸವ ಮಾರ್ಗ ಸಹಪುರ ವಿಶ್ವರಾದ್ಯ ಸತ್ಯಂ ಪೇಟೆ ಇವರು ವಿಶೇಷ ಉಪನ್ಯಾಸ ನೀಡುವರು. ರಾಷ್ಟ್ರೀಯ ಬಸವದಳ ಬೆಂಗಳೂರಿನ ರಾಜ್ಯಾಧ್ಯಕ್ಷ ಕೆ. ವೀರೇಶ್ ಕುಮಾರ, ಶ.ಸಾ. ಪರಿಷತ್ತಿನ ಅಧ್ಯಕ್ಷ ಬಿ.ನಾಗನಗೌಡರು ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ರಾಷ್ಟ್ರೀಯ ಬಸವದಳದ ಕಾರ್ಯಾಧ್ಯಕ್ಷ ಶಾರಾದ ತಾಯಿ, ಅಜಯಕುಮಾರ ತಾಂಡೂರ, ಬಸವಬಳಗ ಟ್ರಸ್ಟ್‍ನ ಬಸವ ಕಿರಣ ಸ್ವಾಮಿ, ಕೊಪ್ಪಳದ ಕೊರ್ಲಹಳ್ಳಿ ವೀರಣ್ಣ ಲಿಂಗಾಯತ, ವೀರಭದ್ರ ಕುರುಕುಂದಿ ಬಸವಕೇಂದ್ರ ಸಿಂಧನೂರು, ಜಾಗತಿಕ ಲಿಂಗಾಯ ಮಹಾಸಭೆ ರಾಯಚೂರಿನ ಅಧ್ಯಕ್ಷ ರುದ್ರಪ್ಪ, ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಸಿರಿಗೇರಿ ಪನ್ನರಾಜ್, ಬಳ್ಳಾರಿ ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ಟಿ.ಕೊಟ್ರಪ್ಪ ಇವರ ದಿವ್ಯ ಸಮ್ಮುಖದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.