ಜು.13 ರಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಸೇವೆ

ನವದೆಹಲಿ, ಜು.೮- ಇದೇ ತಿಂಗಳ ೧೩ ರಂದು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ೨.೧ ಕಿಮೀ ಉದ್ದದ ಡ್ಯುಯಲ್ ಲೇನ್ ಎಲಿವೇಟೆಡ್ ಕ್ರಾಸ್ ಟ್ಯಾಕ್ಸಿವೇಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಉದ್ಘಾಟಿಸಲಿದ್ದಾರೆ.
ಇದು ಭಾರತದ ಮೊದಲ ಎಲಿವೇಟೆಡ್ ಕ್ರಾಸ್ ಟ್ಯಾಕ್ಸಿವೇ ಈಸ್ಟರ್ನ್ ಕ್ರಾಸ್ ಟ್ಯಾಕ್ಸಿವೇ (ಇಸಿಟಿ) ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.ಈ ವಿಮಾನ ನಿಲ್ದಾಣದ ಪೂರ್ವ ಭಾಗದಲ್ಲಿ ಉತ್ತರ ಮತ್ತು ದಕ್ಷಿಣದ ಏರ್‌ಫೀಲ್ಡ್‌ಗಳ ಸಂಪರ್ಕ ಇದೆ.
ಅಧಿಕಾರಿಗಳ ಪ್ರಕಾರ, ಎಲಿವೇಟೆಡ್ ಕ್ರಾಸ್ ಟ್ಯಾಕ್ಸಿವೇ ಉದ್ದೇಶವು ವಿಮಾನಗಳಿಗೆ ಟ್ಯಾಕ್ಸಿ ದೂರವನ್ನು ಕಡಿಮೆ ಮಾಡುವುದು, ವಿಮಾನ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ಮತ್ತು ಎಟಿಎಫ್‌ನಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವುದು ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವುದಾಗಿದೆ.
ಇದಲ್ಲದೆ, ಟ್ಯಾಕ್ಸಿವೇ ಟ್ಯಾಕ್ಸಿಯ ಮಾರ್ಗಗಳು ಮತ್ತು ವಿಮಾನ ಕಾರ್ಯಾಚರಣೆಗಳನ್ನು ಹೆಚ್ಚಾಗುವ ನಿರೀಕ್ಷೆಯಿದೆ. ಇದರ ಪರಿಣಾಮವಾಗಿ ವರ್ಷಕ್ಕೆ ಸರಿಸುಮಾರು ೫೫,೦೦೦ ಟನ್ ಗಳಷ್ಟು ಇಂಗಾಲ ಹೊರಸೂಸುವಿಕೆ ಕಡಿಮೆಯಾಗುತ್ತದೆ ಎಂದು ಮೂಲಗಳು ತಿಳಿಸಿವೆ.