ಜು.1 ರಂದು ವನಮಹೋತ್ಸವ ಆಚರಣೆ

ಬೀದರ್:ಜೂ.28: ಜುಲೈ 1 ರಂದು ನಡೆಯಲಿರುವ ವನಮೋಹತೋತ್ಸವ ನಿಮಿತ್ಯ
ಬೀದರ್ ತಾಲೂಕಿನ ಪ್ರತಿ ಗ್ರಾ.ಪಂ.ನಲ್ಲಿ ಗಿಡ ನೆಡಲು ಕ್ರಮಕೈಗೊಳ್ಳಲಾಗಿದೆ ಎಂದು ಬೀದರ ತಾಲ್ಲೂಕ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ್ ಹೇಳಿದರು.
ಅವರು ನಗರದ ಬೀದರ ತಾಲ್ಲೂಕ ಪಂಚಾಯತ ಕಚೇರಿ ಸಭಾಂಗಣದಲ್ಲಿ ಜುಲೈ 01 ರಂದು ನಡೆಯಲಿರುವ ವನಮಹೋತ್ಸವ ನಿಮಿತ್ಯ ಕರೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಈಗಾಗಲೇ ಮಾರ್ಗ ನಕ್ಷೆ ತಯಾರಿಸಲಾಗಿದ್ದು, ಗುರುತು ಹಾಕುವುದು ಮತ್ತು ಹೊಂಡ ಹಾಕುವುದು ಬಹುತೇಕ ಪೂರ್ಣಗೊಂಡಿದೆ ಎಂದರು
ವನಮೋಹೋತ್ಸವದಂದು ಸಾರ್ವಜನಿಕ ಸ್ಥಳಗಳಲ್ಲಿ, ಮುಖ್ಯವಾಗಿ ಶಾಲಾ ಆವರಣದಲ್ಲಿ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಇನ್ನು ಹೆಚ್ಚಿನ ಸಸಿಗಳು ನೆಡಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.
ವನಮಹೋತ್ಸವವು ವರ್ಷದಲ್ಲಿ ಒಂದು ವಾರ ಸಸಿ ನೆಡುವ ಹಬ್ಬವಾಗಿದ್ದು ಇದನ್ನು ಜುಲೈ ಮೊದಲ ವಾರ ಆಚರಿಸಲಾಗುತ್ತದೆ ಈ ಬಾರಿ ವನಮಹೋತ್ಸವವನ್ನು ಹೆಚ್ಚಿನ ಸಸಿಗಳನ್ನು ನೆಡುವ ಮೂಲಕ ವಿಜೃಂಭಣೆಯಿಂದ ಆಚರಿಸೊಣ ಎಂದರು.
ಸಭೆಯಲ್ಲಿ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಶರತ ಅಭಿಮಾನ, ದೇವಪ್ಪ,ಎಲ್ಲಾ ತಾಲ್ಲೂಕಿನ ಶಿಕ್ಷಣಾಧಿಕಾರಿಗಳು, ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.