ಜು. 1ರಂದು ಪತ್ರಿಕಾ ದಿನಾಚರಣೆ-ಸದಸ್ಯರಿಗೆ ಗುರುತಿನ ಚೀಟಿ ವಿತರಣೆ

ದಾವಣಗೆರೆ, ಜೂ.27- ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವುದೂ ಸೇರಿದಂತೆ, ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದಾವಣಗೆರೆ ಜಿಲ್ಲಾ ಘಟಕ ತೀರ್ಮಾನ ಕೈಗೊಂಡಿದೆ.ಬರುವ ಜುಲೈ 1 ರಂದು ಪತ್ರಿಕಾ ದಿನಾಚರಣೆ ಮತ್ತು ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸುವುದು, ಜುಲೈ 8 ಅಥವಾ 9 ರಂದು ಪತ್ರಿಕಾ ದಿನಾಚರಣೆ ಪ್ರಯುಕ್ತ ಪತ್ರಿಕೋದ್ಯಮದ ಸಾಧಕರಿಗೆ `ಮಾಧ್ಯಮ ಮಾಣಿಕ್ಯ’ ಪ್ರಶಸ್ತಿ ಪ್ರದಾನ, ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಲಾಗಿದೆ.ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಅಧ್ಯಕ್ಷತೆಯಲ್ಲಿ ನಗರದ ಹೋಟೆಲ್ ಅಪೂರ್ವ ಸಭಾಂಗಣದಲ್ಲಿ ನಿನ್ನೆ ನಡೆದ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು .ಸಭೆಯನ್ನುದ್ದೇಶಿಸಿ ಮಾತನಾಡಿದ ಮಂಜುನಾಥ, ಜುಲೈ ಮಾಸಾಂತ್ಯದಲ್ಲಿ ದಾವಣಗೆರೆ ಜಿಲ್ಲಾ ಪತ್ರಕರ್ತರ ಸಮ್ಮೇಳನ ಮತ್ತು ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮವನ್ನೂ ನಡೆಸಲಾಗುವುದು ಎಂದು ತಿಳಿಸಿದರು.ಸಂಘದ ಸದಸ್ಯರಿಗೆ ಒಂದು ದಿನದ ಪ್ರವಾಸ, ಸಂಘದ ಸದಸ್ಯರು ಮತ್ತು ಅವರ ಕುಟುಂಬ ವರ್ಗದವರಿಗೆ ಕ್ರೀಡಾಕೂಟ, ಸಾಂಸ್ಕöÈತಿಕ ಕಾರ್ಯಕ್ರಮಗಳು, ದಾವಣಗೆರೆ ಜಿಲ್ಲೆಯಲ್ಲಿರುವ 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ಪತ್ರಕರ್ತನ್ನು ಗೌರವಿಸುವ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಹೇಳಿದರು.ಅಲ್ಲದೇ, ದಾವಣಗೆರೆ ಜಿಲ್ಲೆಯ ಪತ್ರಿಕೋದ್ಯಮದ ಇತಿಹಾಸ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಮತ್ತು ಸಲ್ಲಿಸುತ್ತಿರುವ ಪತ್ರಕರ್ತರ ಸಮಗ್ರ ಮಾಹಿತಿಯನ್ನೊಳಗೊಂಡ ಗ್ರಂಥವೊAದನ್ನು ಪ್ರಕಟಿಸುವ ಸಂಬAಧ ಹಿರಿಯ ಪತ್ರಕರ್ತರ ಸಭೆಯನ್ನು ನಡೆಸಿ, ಸಲಹೆ – ಸೂಚನೆ ಪಡೆಯಲಾಗುವುದು ಎಂದರು.ಈ ಸಂಘದಿAದ ಪ್ರಸಕ್ತ ಸಾಲಿನಿಂದ ಪ್ರತಿಭಾನ್ವಿತ ಪತ್ರಕರ್ತರಿಗೆ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ನೀಡಲು ಕೈಗೊಂಡಿರುವ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಆ ಪ್ರಶಸ್ತಿಗಳ ಪ್ರದಾನ ಮಾಡುವ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಮಂಜುನಾಥ ವಿವರಿಸಿದರು.ಸಂಘದ ರಾಜ್ಯ ಸದಸ್ಯ ಕೆ. ಚಂದ್ರಣ್ಣ ಮಾತನಾಡಿ, ಪತ್ರಕರ್ತರ ಮತ್ತು ಅವರ ಕುಟುಂಬ ವರ್ಗದವರಿಗಾಗಿ ಆರೋಗ್ಯ ಶಿಬಿರ ನಡೆಸುವಂತೆ ನೀಡಿದ ಸಲಹೆಯನ್ನು ಸಭೆ ಸಹಮತ ವ್ಯಕ್ತಪಡಿಸಿತು.ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್, ವಿಷಯಗಳನ್ನು ಸಭೆಗೆ ಮಂಡಿಸಿ, ಸಂಘದಿAದ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳ ರೂಪುರೇಷೆ ಕುರಿತಂತೆ ಮಾಹಿತಿ ನೀಡಿದರು.ಭಾರತೀಯ ಪತ್ರಕರ್ತರ ಒಕ್ಕೂಟದ ರಾಷ್ಟಿçÃಯ ಮಂಡಳಿ ನಿರ್ದೇಶಕ ಎಸ್.ಕೆ. ಒಡೆಯರ್, ಉಪಾಧ್ಯಕ್ಷರುಗಳಾದ ಹೆಚ್.ಎನ್. ಪ್ರಕಾಶ್, ಆರ್.ಎಸ್. ತಿಪ್ಪೇಸ್ವಾಮಿ, ಕಾರ್ಯದರ್ಶಿ ಜಿ.ಆರ್. ನಿಂಗೋಜಿರಾವ್, ನಿರ್ದೇಶಕರುಗಳಾದ ಕೃಷ್ಣೋಜಿರಾವ್, ಕೆ.ಸಿ. ಮಂಜುನಾಥ್, ಬಿ.ಎಸ್. ಮುದ್ದಯ್ಯ, ರಾಮಪ್ರಸಾದ್, ಮತ್ತಿತರರು ಸಲಹೆ – ಸೂಚನೆಗಳನ್ನು ನೀಡಿದರು.