ಜು. 1ಕ್ಕೆ ಕಮಲಾಪೂರ ತಾಲೂಕಿನ ಕೆ.ಡಿ.ಪಿ ಸಭೆ

ಕಲಬುರಗಿ,ಜೂ.28: ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಅಧ್ಯಕ್ಷತೆಯಲ್ಲಿ ಜುಲೈ 1 ರಂದು ಬೆಳಿಗ್ಗೆ 11 ಗಂಟೆಗೆ ಕಮಲಾಪೂರ ಮೈರಾಡಾ ಸಂಸ್ಥೆಯಲ್ಲಿ ಕಮಲಾಪೂರ ತಾಲೂಕಿಗೆ ಸಂಬಂಧಿಸಿದಂತೆ ಕೆ.ಡಿ.ಪಿ. ಸಭೆ ಕರೆಯಲಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.