ದಾವಣಗೆರೆ.ಜೂ.೨೪: ಬೆಂಗಳೂರಿನ ವೀರಲೋಕ ಪ್ರಕಾಶನ ವತಿಯಿಂದ ದಾವಣಗೆರೆಯ ಶ್ರೀ ಸಿದ್ದಗಂಗಾ ಶಾಲೆಯ ಸಹಯೋಗದಲ್ಲಿ ಜುಲೈ ೮ ಮತ್ತು ೯ ರಂದು ಬೆಳಿಗ್ಗೆ ೧೦ ಸಂಜೆ ೫ ಎರಡು ದಿನಗಳ ಕಾಲ ‘ದೇಸಿ ಜಗಲಿ ಕಥಾ ಕಮ್ಮಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತಿ ಪಾಪು ಗುರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪುಸ್ತಕ ಪ್ರಕಾಶನ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಸದಾ ಹೊಸ ಪ್ರಯೋಗಳನ್ನು ನಡೆಸುತ್ತಿರುವ ವೀರಲೋಕ ಪ್ರಕಾಶನವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಯಲಿರುವ ಕಥಾ ಕಮ್ಮಟಗಳಿಗೆ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ ಎಂದರು.ಕಮ್ಮಟದ ನಿರ್ದೇಶಕರಾಗಿ ಸಂತೆಬೆನ್ನೂರು ಫೈಜ್ಞಾಟ್ರಾಜ್ ಮತ್ತು ಇಂದ್ರಕುಮಾರ್.ಹೆಚ್.ಬಿ ಆಯ್ಕೆಯಾಗಿದ್ದಾರೆ . ಜುಲೈ ೮ ರ ಮುಂಜಾನೆ ೧೦ ಗಂಟೆಗೆ ಕಮ್ಮಟದ ಕಾರ್ಯಕ್ರಮವನ್ನು ಖ್ಯಾತ ಕಥೆಗಾರರಾದ ಲೋಕೇಶ್ ಅಗಸನಕಟ್ಟೆ ಉದ್ಘಾಟನೆ ಮಾಡಲಿದ್ದಾರೆ . ಮುಖ್ಯ ಅತಿಥಿಗಳಾಗಿ ಡಾ.ಮಲ್ಲಿಕಾರ್ಜುನ್ ಕಲಮರಹಳ್ಳಿ ಹಾಗೂ ಜಸ್ಟಿನ್ ಡಿಸೋಜಾ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಜುಲೈ ೯ ನೇ ಭಾನುವಾರ ಸಂಜೆ ೫ ಗಂಟೆಗೆ ಕಾರ್ಯಕ್ರಮದ ಸಮಾರೋಪದಲ್ಲಿ ವೀರಲೋಕ ಪ್ರಕಾಶನ ಸಂಸ್ಥೆಯ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್ ಹಾಗೂ ಹಿರಿಯ ಕಥೆಗಾರರಾದ ಕಾ.ತ .ಚಿಕ್ಕಣ್ಣ ಮತ್ತು ಲಕ್ಷ್ಮಣ್ ಕೊಡಸೆ ಹಾಗೂ ದಾವಣಗೆರೆ ಜಿಲ್ಲೆಯ ಪ್ರಮುಖ ಬರಹಗಾರರು ಭಾಗವಹಿಸಲಿದ್ದಾರೆ ಎಂದರು. ಹಿರಿಯ ಕಥೆಗಾರರಾದ ಕಾ.ತ. ಚಿಕ್ಕಣ್ಣ ಮತ್ತು ಲಕ್ಷ್ಮಣ ಕೊಡಸ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಕಥಾ ಕಮ್ಮಟಕ್ಕೆ ೪೨ ವರ್ಷದೊಳಗಿನ ಸಾಹಿತ್ಯಾಸಕ್ತ ಯುವ ಜನರು ಅರ್ಜಿ ಸಲ್ಲಿಸಬಹುದಾಗಿದೆ . ಜಿಲ್ಲೆಯ ಯುವ ಕಥೆಗಾರರು ಈ ಕಮ್ಮಟದ ಪ್ರಯೋಜನ ಪಡೆದು ಕೊಳ್ಳಲು ಸೂಚಿಸಿದ . ಆಸಕ್ತರು ವೀರಲೋಕ ಬುಕ್ಸ್ ಕಾಮ್ ಜಾಲತಾಣದಿಂದ https://veeralokabooks.com/wp content / uploads / 2023 / 05 / desi – jagall – arji.pdf ಈ ಲಿಂಕ್ ಬಳಸಿ ಅರ್ಜಿ ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿ ಜೂನ್ ೨೮ ರೊಳಗೆ ( ಪಾಪುಗುರು ) ೯೮೪೪೧೮೭೫೭೪ ವಾಟ್ಸಪ್ ಸಂಖ್ಯೆಗೆ ಅರ್ಜಿ ಕಳುಹಿಸುವುದು.ಹೆಚ್ಚಿನ ಮಾಹಿತಿಗೆ ೯೮೪೪೧೮೭೫೭೪ ಸಂಪರ್ಕಿಸಲು ತಿಳಿಸಿದರು.ಕಮ್ಮಟದ ಎರಡು ದಿನ ತಿಂಡಿ ಮತ್ತು ಊಟದ ವ್ಯವಸ್ಥೆಯಿರುತ್ತದೆ . ವಸತಿ ವ್ಯವಸ್ಥೆ ಇರುವುದಿಲ್ಲ . ನಾಡಿನ ಪ್ರಮುಖ ಕಥೆಗಾರರು ಭಾಗವಹಿಸಿ ಕಥೆ ಕಟ್ಟುವಿಕೆ ಮತ್ತು ಅದರ ಸೂಕ್ಷ್ಮತೆಗಳ ಬಗ್ಗೆ ಅವಲೋಕಿಸುತ್ತಾರೆ. ಹಾಗೂ ಶಿಬಿರಾರ್ಥಿಗಳೊಂದಿಗೆ ಸಂವಾದ ಮಾಡುತ್ತಾರೆ . ಇಲ್ಲಿನ ಉತ್ತಮ ಶಿಬಿರಾರ್ಥಿಗಳ ಕಥೆಗಳು ವೀರಲೋಕ ಪ್ರಕಾಶನದಲ್ಲಿ ಪುಸ್ತಕಗಳಾಗಿ ಮುದ್ರಣಗೊಳ್ಳಲಿವೆ ಎಂದರು.ಕಮ್ಮಟದಲ್ಲಿ ಭಾಗವಹಿಸಲು ೨೫ ಜನರಿಗೆ ಮಾತ್ರ ಅವಕಾಶವಿದ್ದು, . ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ನೀಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ, ಸಾಹಿತಿ ಹಾಗೂ ಕಥೆಗಾರರಾದ ಫೈಜ್ನಟರಾಜ್ ಹಾಗೂ ಸದಾಶಿವ ಸೊರಟೂರು ಉಪಸ್ಥಿತರಿದ್ದರು.
.