ಜು.೨೬ ವಿವಿಧ ಬೇಡಿಕೆಗಳು ಈಡೇರಿಕೆ ಟೈಲರ್ ಅಸೋಸಿಯೇಷನ್ ರಾಜ್ಯಾದಂತ ಪ್ರತಿಭಟನೆ

ರಾಯಚೂರು,ಜು.೨೪- ಸಮಾಜದ ಅತ್ಯುನ್ನತ ವೃತ್ತಿ ಮಾಡುವ ಹೊಲಿಗೆ ಕೆಲಸಗಾರರಿಗೆ ಜೀವನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಟೈಲರ್ ಅಸೋಸಿಯೇಷನ್ ವತಿಯಿಂದ ವಿವಿಧ ಬೇಡಿಕೆಗಳು ಈಡೇರಿಕೆ ಒತ್ತಾಯಿಸಿ ಇದೇ ಜುಲೈ ೨೬ ರ ಮಂಗಳವಾರ ರಂದು ರಾಜ್ಯಾದಂತ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಟೈಲರ್ ಅಸೋಸಿಯೇಷನ್ ರಾಜ್ಯ ಉಪಾಧ್ಯಕ್ಷರಾದ ಮಹ್ಮದ್ ಫಿರೋಜ್ ಹಮರಾಜ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಹೊಲಿಗೆ ಕೆಲಸದಿಂದ ಜೀವನ ಸಾಗಿಸುತ್ತಿರುವ ಸುಮಾರು ೧೦ ಲಕ್ಷ ಕೂ ಹೆಚ್ಚು ಸ್ತ್ರೀ, ಪುರುಷ ಹೊಲಿಗೆ ಕೆಲಸಗಾರರಿಗೆ ಜೀವನ ಭದ್ರತೆಯನ್ನು ಒದಗಿಸಲು ಟೈಲರ್ ಕ್ಷೇಮನಿಧಿ ಮಂಡಳಿಯನ್ನು ರಚಿಸುವಂತೆ ಕಳೆದ ೨೩ ವರ್ಷಗಳಿಂದ ಮನವಿ ಹಾಗೂ ಶಾಂತಿ ರೀತಿಯ ಚಳುವಳಿಗಳ ಮೂಲಕ ರಾಜ್ಯ ಸರಕಾರವನ್ನು ಒತ್ತಾಯಿಸಿ ಕೇಂದ್ರ ಸರಕಾರಕ್ಕೂ ಒತ್ತಡ ಹೇರುವಂತೆ ಚಳುವಳಿಯನ್ನು ಹಮ್ಮಿಕೊಳ್ಳಲಾಯಿತು ಎಂದರು.
ಬೇಡಿಕೆಯನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಅಸಂಘಟಿತ ಕಾರ್ಮಿಕ ಸಮಾಜಿಕ ಭದ್ರತಾ ಮಂಡಳಿ ರಚನೆ ಮಾಡಿದರು ಎಂದರು. ರಾಜ್ಯ ಸರಕಾರದ ಮುಂದೆ ಅನೇಕ ಭಾರಿ ಸಂಘಟನೆಯು ಮೂಲಕ ಹೋರಾಟ ಮಾಡಿ ಮನವಿ ಸಲ್ಲಿಸಿದರು ಪ್ರಯೋಜನವಾಗಲಿಲ್ಲ.
೬೦ ವರ್ಷ ತುಂಬಿದ ಟೈಲರುಗಳಿಗೆ ಭವಿಷ್ಯನಿಧಿ ಮಾಸಿಕ ಪಿಂಚಣಿ ಜಾರಿ ಮಾಡುವಲ್ಲಿ ಸರಕಾರ ಮೀನ ಮೇಷ ಎಣಿಸುವುದನ್ನು ಮನಗಂಡು ಟೈಲರ್ ಅಸೋಸಿಯೇಷನ್ ಸಂಘಟನೆ ವತಿಯಿಂದ ಜು.೨೬ ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಧರಣಿ ಸತ್ಯಾಗ್ರಹವನ್ನು ಕೈಗೊಂಡು ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿಲಾಗುತ್ತದೆ ಎಂದರು.
ಸಮಾಜದ ಪ್ರತಿಯೊಬ್ಬರ ಮಾನ ಕಾಪಾಡಿರುವುದಲ್ಲದೆ ಮಾನ ಹೆಚ್ಚಿಸಿದ ಹೊತ್ತಿಗೆ ವೃತ್ತಿಬಾಂಧವರಿಗೆ ಮುಂದಿನ ೧೫ ದಿನಗಳೊಳಗೆ ಸರಕಾರ ನ್ಯಾಯಒದಗಿಸಿಕೊಡಬೇಕು ಇಲ್ಲವಾದಲ್ಲಿ ಮುಂದಿನ ಒಂದು ತಿಂಗಳ ಒಳಗೆ ರಾಜ್ಯದ್ಯಾಂತ ತೀವ್ರವಾಗಿ ಹೋರಾಟವನ್ನು ಕೈಗೊಳ್ಳುವುದು ಎಂದರು.
ಸಮಾಜದ ಅಗತ್ಯವಾದ ವೃತ್ತಿ ಮಾಡುವ ನಮಗೆ ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡುವಲ್ಲಿ ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ಜನಪ್ರತಿನಿಧಿಗಳು ಗಂಭೀರ ಚಿಂತನೆ ಮಾಡಬೇಕು. ಸಮಾಜದ ಅತ್ಯುನ್ನತ ವೃತ್ತಿ ಮಾಡುವ ನಮಗೆ ಸ್ವಾತಂತ್ರ್ಯ ದೊರಕಿ ೭೫ರ ಸಂಭ್ರಮದಲ್ಲಿದ್ದರು ನಮಗೆ ನ್ಯಾಯ ಸಿಕ್ಕಿಲ್ಲ. ನಮ್ಮ ನ್ಯಾಯೋಚಿತ ಹೋರಾಟಕ್ಕೆ ಸಮಾಜದ ಪ್ರತಿಯೋರ್ವ ಪ್ರಬುದ್ಧ ಜನತೆಯು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿ.ಎಮ್ ಸಲೀಮ್ ಪಾಶ, ಮಹೇಶ ಕುಮಾರ್, ಮಹ್ಮದ್, ಜೇಬಾ ಕೌಶಲ್, ರೆಹಮಾತ್ ತುಲ್ಲಾ, ರೇಣುಕಾ ಹಾಗೂ ನಿರ್ಮಲ ಸೇರಿದಂತೆ ಉಪಸ್ಥಿತರಿದ್ದರು.