ಜು.೨೪ ಸೂರ್ಯೋದಯ ವಾಕಿಂಗ್ ಕ್ಲಬ್ ನ ೯ನೇ ವಾರ್ಷಿಕೋತ್ಸವ ಸಮಾರಂಭ – ಬಿ.ಬಸವರಾಜ

ರಾಯಚೂರು,ಜು.೨೨- ಸೂರ್ಯೋದಯ ವಾಕಿಂಗ್ ಕ್ಲಬ್ ನ ೯ನೇ ವಾರ್ಷಿಕೋತ್ಸವ ಸಮಾರಂಭ ಅಂಗವಾಗಿ ಸೌಹಾರ್ದ ಕ್ರಿಕೆಟ್ ಟೂರ್ನಮೆಂಟ್ ಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೂರ್ಯೋದಯ ವಾಕಿಂಗ್ ಕ್ಲಬ್ ಅಧ್ಯಕ್ಷ ಬಿ.ಬಸವರಾಜ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ನಗರದ ಪೊಲೀಸ್ ಕ್ರೀಡಾಂಗಣದಲ್ಲಿ ಜುಲೈ ೨೪ ರಂದು ಬೆಳಿಗ್ಗೆ ೭ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಈ ಟೂ ರ್ನಮೆಂಟ್ ನಲ್ಲಿ ೫ ತಂಡಗಳು ಭಾಗವಹಿಸಲಿವೆ. ಸೂರ್ಯೋದಯ ವಾಕಿಂಗ್ ಕ್ಲಬ್ ಕಳೆದ ೯ ವರ್ಷಗಳಿಂದ ಆರೋಗ್ಯ,ಶಿಕ್ಷಣ ,ಪರಿಸರ ಸಂಬಂಧಿಸಿ ಹಲವರು ಕಾರ್ಯಕ್ರಮಗಳನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಟೂರ್ನಮೆಂಟ್ ಉದ್ಘಾಟನೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜೆಸ್ಕಾಂ ಅಧಿಕ ಅಭಿಯಂತರ ಗುಪ್ತ ಚಂದ್ರಶೇಖರ್ ದೇಸಾಯಿ, ಮಾನಸಿಕ ರೋಗ ತಜ್ಞ ಡಾ.ಶ್ರೀದರ್ ರೆಡ್ಡಿ,ಗುರುನಾಥ, ಸುನಿಲ್ ಅಗರವಾಲ್, ಡಾ.ರಿಯಾಜುದ್ದೀನ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುನಿಸ್ವಾಮಿ,ನರಸಿಂಹ ರೆಡ್ಡಿ,ರಾಮಣ್ಣ ಇದ್ದರು.