ಜು. ೨೦ ನಗರದಲ್ಲಿ ಪೂರ್ವಭಾವಿ ಸಭೆ – ಕೆ.ಬಸವಂತಪ್ಪ

ಆ.೩ ಸಿದ್ದರಾಮಯ್ಯ ೭೫ ಅಮೃತ ಮಹೋತ್ಸವದ ಕಾರ್ಯಕ್ರಮ
ರಾಯಚೂರು, ಜು.೧೮- ಆಗಸ್ಟ್ ೩ ರಂದು ದಾವಣಗೆರೆಯಲ್ಲಿ ಸಿದ್ದರಾಮಯ್ಯ- ೭೫ ಅಮೃತ ಮಹೋತ್ಸವ ಅಂಗವಾಗಿ ಜುಲೈ ೨೦ ರಂದು ನಗರದಲ್ಲಿ ಪೂರ್ವಬಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಬಸವಂತಪ್ಪ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ನಗರದ ಉತ್ಸವ ಗಾರ್ಡನ್ ಬಾಕ್ವೆಂಟ್ ಹಾಲ್ ನಲ್ಲಿ ಬೆಳಿಗ್ಗೆ ೧೧ ಗಂಟೆಗೆ ಸಿದ್ದರಾಮಯ್ಯ ೭೫ ಅಮೃತ ಮಹೋತ್ಸವ ಅಂಗವಾಗಿ ಚರ್ಚಿಸಲು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ. ಎಮ್.ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೭೫ ನೇ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಸಿದ್ದರಾಮಯ್ಯ ೭೫ ಅಮೃತ ಮಹೋತ್ಸವ ಹೇಳುವುದಕ್ಕಿಂತ ಸಿದ್ದರಾಮಯ್ಯ ೭೫ ನೇ ಜಾತ್ರಾ ಮಹೋತ್ಸವ ಅನ್ನೋದು ತಪ್ಪಿಲ್ಲ.ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅವಧಿಯಲ್ಲಿ ೫ ವರ್ಷ ಯಾವುದೇ ಆಪಾದನೆ ಇಲ್ಲದೆ ಸರ್ಕಾರವನ್ನು ಮಾಡಿದ್ದಾರೆ.ಆದ್ದರಿಂದ ಜುಲೈ ೨೦ ರಂದು ನಡೆಯುವ ಪೂರ್ವಭಾವಿ ಸಭೆಗೆ ಕುರುಬರ ಸಮಾಜದ ಬಂಧುಗಳು ಹಾಗೂ ಶೋಷಿತ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಬಿ.ಬಸವರಾಜ,ಕೆ.ನಾಗರಾಜ ಮಡ್ಡಿಪೇಟೆ,ಬೀರಪ್ಪ, ಡಿ ಜೆ ಕೇಶವ ಸೇರಿದಂತೆ ಇತರರು ಉಪಸ್ಥಿತರಿದ್ದರು.