ಜು.೧೮ ಕ್ಕೆ ರಾಜ್ಯಮಟ್ಟದ ಭೋವಿ ವಡ್ಡರ ಪ್ರತಿಭಾ ಪುರಸ್ಕಾರ

ಸಂಜೆವಾಣಿ ವಾರ್ತೆ

ಹೊನ್ನಾಳಿ ಜು.9; ಶ್ರೀ ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರು ಪೀಠಾಧ್ಯಕ್ಷರಾದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ದೀಕ್ಷಾ  ರಜತ ಮಹೋತ್ಸವ ಪ್ರಯುಕ್ತ ಜುಲೈ 18ರಂದು ಚಿತ್ರದುರ್ಗದ ಭೋವಿ ಗುರುಪೀಠದ ಆವರಣದಲ್ಲಿ ರಾಜ್ಯಮಟ್ಟದ ಭೋವಿ ವಡ್ಡರ ಪ್ರತಿಭಾ ಪುರಸ್ಕಾರ ಹಾಗೂ ವಧು-ವರರ ಮತ್ತು ಪಾಲಕರ ಸಮಾವೇಶ ಆಯೋಜಿಸಲಾಗಿದೆ ಎಂದು ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಕ್ರಾಂತಿಕಾರಿ ಬೋವಿ ಸಂಘರ್ಷ ಸಮಿತಿ ತಿಳಿಸಿದೆ.  ಹೊನ್ನಾಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರಾಂತಿಕಾರಿ ಭೋವಿ ಸಂಘರ್ಷ ಸಮಿತಿಯವರು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 90 ಕ್ಕೂ ಹೆಚ್ಚು ಅಂಕ ಪಡೆದ ಭೋವಿ ಸಮುದಾಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಆಸಕ್ತ ಭೋವಿ ಸಮಾಜದ ವಿದ್ಯಾರ್ಥಿಗಳು ಸ್ವ ವಿವರದ ಅರ್ಜಿಯೊಂದಿಗೆ ಅಂಕಪಟ್ಟಿ ಜಾತಿ ಪ್ರಮಾಣ ಪತ್ರ ಎರಡು ಪಾಸ್ಪೋರ್ಟ್ ಫೋಟೋ ಲಗತ್ತಿಸಿ ಜುಲೈ ೧೦ ರೊಳಗೆ ಪ್ರತಿಭಾ ಪುರಸ್ಕಾರ ವಿಭಾಗ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾ ಸಂಸ್ಥಾನ ಬೋವಿ ಗುರುಪೀಠ ಶ್ರೀ ಇಮ್ಮಡಿ ನಗರ ದಾವಣಗೆರೆ ಜಿಲ್ಲೆ ರಾಷ್ಟ್ರೀಯ ಹೆದ್ದಾರಿ ನಾಲ್ಕು, ಚಿತ್ರದುರ್ಗ 5775 02 ಇಲ್ಲಿಗೆ ಕಳಿಸಬೇಕೆಂದು ತಿಳಿಸಿದರು. ಸಮಾವೇಶದಲ್ಲಿ ವಧು-ವರರನ್ನು ಪರಸ್ಪರ ಪರಿಚಯಿಸಲಾಗುವುದು ಆಕ್ಷೇಪಣೆ ಹೊಂದಿದ ವಧುವರರನ್ನು ಹಾಗೂ ಪಾಲಕರನ್ನು ಸ್ಥಳದಲ್ಲಿಯೇ ಮಾತುಕತೆಗೆ ಅವಕಾಶ ಕಲ್ಪಿಸಲಾಗುವುದು. ಸಮಾವೇಶದಲ್ಲಿ ಭಾಗವಹಿಸಿ ಸದಸ್ಯತ್ವ ಪಡೆಯುವವರಿಗೆ ಮಾಹಿತಿ ಹಾಗೂ ಪರಸ್ಪರ ತೋರಿಸುವ ಸೇವೆ ನೀಡಲಾಗುವುದು ಎಂದು ಸಮಿತಿ ತಿಳಿಸಿದೆ.ಸುದ್ದಿಗೋಷ್ಠಿಯಲ್ಲಿ ಕಾಂತರಾಜು .ನಾಗರಾಜ. ಶಶಿಧರ. ಡಿ ಸಿ ರಾಜು. ಕೆಬಿ ವೀರೇಶ್. ಬಿಸಿ ಮೂರ್ತಿ. ಬಿ ದಿನೇಶ್ ಇನ್ನಿತರದಿದ್ದರು.