ಜು.೧೫:ಕಮಣ್ಯೇ ವಾದಿಕಾರಸ್ತೇ ಚಿತ್ರ ಬಿಡುಗಡೆ

ತುಮಕೂರು, ಜು. ೧೩- ಅವನಿ ಪ್ರೊಡಕ್ಷನ್ ಅವರ ನುರಿತ ತಂತ್ರಜ್ಞರು ಮತ್ತು ಹೊಸ ಕಲಾವಿದರನ್ನು ಒಳಗೊಂಡಿರುವ ಕಮಣ್ಯೇ ವಾದಿಕಾರಸ್ತೇ ಚಲನಚಿತ್ರ ಜುಲೈ ೧೫ ರಂದು ರಾಜ್ಯಾದ್ಯಂತ ೧೦೦ಕ್ಕೂ ಹೆಚ್ಚು ಚಲನಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕನಟ ಪ್ರತೀಕ್ ಸುಬ್ರಮಣ್ಯಂ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೩೪ರಲ್ಲಿ ಜೈನಾಗಡಿಯಲ್ಲಿ ನಡೆದ ನೈಜ ಘಟನೆಯ ಎಳೆಯೊಂದನ್ನು ಇಟ್ಟುಕೊಂಡು ಅಕ್ಷನ್, ಅಡ್ವೆಂಚರ್ಸ್ ಹಾಗು ಥ್ರಿಲ್ಲರ್ ಸಿನಮಾ ಮಾಡಲಾಗಿದೆ. ಅಕ್ಷನ್ ಸಿನಿಮಾವಾಗಿದ್ದರೂ ಮನೆ ಮಂದಿಯೆಲ್ಲಾ ಕುಳಿತ ನೋಡುಬಹುದಾದ ಸಿನಿಮಾ ಇದ್ದಾಗಿದ್ದು, ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಪಿಕೇಟ್ ಪಡೆದಿದೆ ಎಂದರು.
ಚಲನಚಿತ್ರಕ್ಕೆ ಅನಿವಾಸಿ ಭಾರತೀಯರಾದ ಡಾ.ರಮೇಶ್ ರಾಮಯ್ಯ ಅವರು ಹಣ ಹೂಡಿಕೆ ಮಾಡಿದ್ದು, ಹಲವಾರು ಹಿರಿಯ ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ತುಮಕೂರು ನಗರದವರೇ ಆದ ಶ್ರೀಹರಿ ಆನಂದ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಇದಾಗಿದೆ.“ಕರ್ಮಣ್ಯೇ ವಾದಿಕಾರಸ್ತೇ” ಸಿನಿಮಾ ನಾಯಕ ನಟನಾಗಿ ನನ್ನ ಮೊದಲ ಸಿನಿಮಾವಾಗಿದೆ. ಇದಕ್ಕಿಂತಲೂ ಮೊದಲು ಹಲವಾರು ನಾಟಕ ತಂಡಗಳಲ್ಲಿ ವಿವಿಧ ನಾಟಕಗಳಲ್ಲಿ ಅಭಿನಯಿಸಿದ್ದು, ಎರಡು ಕಿರುಚಿತ್ರಗಳಲ್ಲಿ ಪಾತ್ರ ನಿರ್ವಹಿಸಿ, ಒಂದು ಕಿರುಚಿತ್ರವನ್ನು ನಿರ್ದೇಶಿಸಿದ್ದೇನೆ. ಬಹಳ ಕಷ್ಟಪಟ್ಟು ಒಳ್ಳೆಯ ಸಂದೇಶವನ್ನು ಹೊಂದಿರುವ ಸಿನಿಮಾ ಮಾಡಿದ್ದು, ಜನರು ಚಲನಚಿತ್ರಮಂದಿರಕ್ಕೆ ಬಂದು ಚಿತ್ರವನ್ನು ವೀಕ್ಷಿಸಿ,ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಕರ್ಮಣ್ಯೇ ವಾದಿಕಾರಾಸ್ತೇ ಸಿನಿಮಾನದ ನಿರ್ದೇಶಕನ ಶ್ರೀಹರಿ ಮಾತನಾಡಿ, ಮೂಲತಃ ತುಮಕೂರು ಜಿಲ್ಲೆಯವನಾದ ನಾನು ಇಂಜಿನಿಯರಿಂಗ್ ಪದವಿಧರ, ಏನಾದರೊಂದು ಹೊಸದು ಸಾಧಿಸಬೇಕೆಂಬ ಛಲದಿಂದ ಗಾಂಧಿನಗರಕ್ಕೆ ಪ್ರವೇಶಿಸಿ, ಹಿರಿಯ ನಿರ್ದೇಶಕರಾದ ನಂದಕೀಶೋರ್ ಅವರ ಬಳಿ ಆರು ವರ್ಷಗಳ ಕಾಲ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಇದೇ ವೇಳೆ ಸ್ನೇಹಿತರೊಂದಿಗೆ ಸೇರಿ ಹಲವಾರು ಕಿರುಚಿತ್ರಗಳನ್ನು ನಿರ್ದೇಶಿಸಿದ್ದು, ಇದು ನನ್ನ ಮೊದಲ ಸಿನಿಮಾ, ಪ್ರತೀಕ್ ಸುಬ್ರಮಣ್ಯಂ ಮತ್ತು ದಿವ್ಯಗೌಡ ಅವರು ಮುಖ್ಯ ಭೂಮಿಕೆಯಲ್ಲಿದ್ದು, ಉಗ್ರಂ ಮಂಜು ಸೇರಿದಂತೆ ಹಲವರು ಚಲನ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಹೃತ್ವಿಕ್ ಮುರುಳೀಧರ ಅವರ ಸಂಗೀತ ನಿರ್ದೇಶನ, ಉದಯಲೀಲಾ ಅವರ ಛಾಯಾಗ್ರಾಹಣ ಸೇರಿದಂತೆ ಕ್ಯಾಮರ ಹಿಂದೆ ನುರಿತ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಯುವ ಗಾಯಕರುಗಳಾದ ಸಂಚಿತ್ ಹೆಗಡೆ, ಇಶ್ರಾಶೃತಿ ಅವರುಗಳ ಗಾಯನವಿದೆ. ವಿಜಯಚಂದ್ರ ಅವರ ಎಡಿಟಿಂಗ್ ಇದೆ. ಹಿರಿಯ ಫೈಟ್ ಮಾಸ್ಟರ್ ಅಶೋಕ್ ಅವರ ಸಾಹನ ನಿರ್ದೇಶಕನದಲ್ಲಿ ಎರಡು ಫೈಟ್ ದೃಶ್ಯಗಳಿವೆ. ಯಾವುದೇ ಡಬ್ಬಲ್ ಮೀನಿಂಗ್ ಡೈಲಾಗ್‌ಗಳಿಲ್ಲದೆ, ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಸಿನಿಮಾ ಇದಾಗಿದೆ. ಜನರು ಸಿನಿಮಾ ನೋಡಿ ಆಶೀರ್ವದಿಸುವಂತೆ ಕೋರಿದರು.
ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ, ಕರ್ಮಣ್ಯೇ ವಾದಿಕಾರಸ್ತೇ ಸಿನಿಮಾದ ನಿರ್ದೇಶಕರಾಗಿರುವ ಶ್ರೀಹರಿ ನಮ್ಮೊಂದಿಗೆ ಆಡಿ ಬೆಳೆದವರು. ಉತ್ತಮ ಕ್ರೀಡಾಪಟು, ಎಸ್.ಐ.ಟಿಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ, ನಂತರ ಸಿನಿಮಾ ಕ್ಷೇತ್ರಕ್ಕೆ ಕಾಲಿರಿಸಿದ್ದಾರೆ. ಅವರ ಸಿನಿ ಪಯಣ ಯಶಸ್ವಿಯಾಗಲಿ ಎಂದು ಸಿದ್ದಗಂಗಾ ಶ್ರೀಗಳು ಹರಿಸಿದ್ದಾರೆ. ಇದು ಪಕ್ಕ ಕನ್ನಡದ ಸಿನಿಮಾ. ಎಲ್ಲರೂ ಥೇಯಟರ್‌ನಲ್ಲಿ ನೋಡಿ,ತುಮಕೂರು ಯುವಕರನ್ನು ಬೆಂಬಲಿಸೋಣ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನೇತಾಜಿ ಶ್ರೀಧರ್, ಚಕ್ರವರ್ತಿ ಗೆಳೆಯರ ಬಳಗದ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದು, ಶುಭ ಹಾರೈಸಿದರು.