ಜು. ೧೩, ಗುರುಪೂರ್ಣಿಮೆ

ಬೆಂಗಳೂರು, ಜು. ೧೧- ಯಲಹಂಕದ ಶಿರಡಿ ಶ್ರೀ ಸಾಯಿ ಮಂದಿರ ಮತ್ತು ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ
ಜು. ೧೩ ರಂದು ಪ್ರಥಮ ವಾರ್ಷಿಕೋತ್ಸವ ಹಾಗೂ ಗುರುಪೂರ್ಣಿಮೆ ಪ್ರಯುಕ್ತ ವಿಶೇಷ ಪೂಜೆ ಹಾಗೂ ಹೋಮವನ್ನು ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ ೭,೩೦ಕ್ಕೆ ದೇವರಿಗೆ ಅಭಿಷೇಕ, ಆರತಿ, ೧೦ಕ್ಕೆ ಗಣಪತಿ ಹೋಮ, ಸಾಯಿಹೋಮ, ಧನ್ವಂತರಿ ಹೋಮ, ಮಧ್ಯಾಹ್ನ ೧೨.೧೦ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ, ಮಹಾಪ್ರಸಾದ ವಿನಿಯೋಗ, ಸಂಜೆ ೭ಕ್ಕೆ ದೂಪಆರತಿ, ೮.೩೦ಕ್ಕೆ ಆರತಿ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಿಡಿಎ ಅಧ್ಯಕ್ಷ, ಶಾಸಕ ಎಸ್.ಆರ್. ವಿಶ್ವನಾಥ್, ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ವಾಣಿಶ್ರೀ ವಿಶ್ವನಾಥ್ ಅವರುಗಳು ಆಗಮಿಸಲಿದ್ದಾರೆ.
ಶಿರಡಿ ಶ್ರೀ ಸಾಯಿ ಮಂದಿರದಲ್ಲಿ ಪ್ರತಿಗುರುವಾರ ಅನ್ನದಾಸೋಹ ಹಾಗೂ ತಿಂಗಳ ಮೊದಲ ಗುರುವಾರ ಉಚಿತ ಸಾಮೂಹಿಕ ವಿವಾಹ ನಡೆಸಲಾಗುತ್ತದೆ. ಆಸಕ್ತಿಯುಳ್ಳವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಶ್ರೀ ಮಂಜುನಾಥಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಎನ್. ರಮೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ. ಮೊ: ೯೯೦೦೦೫೮೯೦೧, ೯೯೦೦೦೪೦೦೧೩.