ಜುಲೈ 3: ಜೆಇಇ ಅಡ್ವಾನ್ಸ್ ಪರೀಕ್ಷೆ

ನವದೆಹಲಿ, ಜ.7- ಪ್ರಸಕ್ತ ಸಾಲಿನ ಜೆಇಇ ಮುಖ್ಯ ಪರೀಕ್ಷೆ ಜುಲೈ 3 ರಂದು ನಡೆಯಲಿದೆ ಎಂದು ಪ್ರಸಕ್ತ ಸಾಲಿನ ಮುಖ್ಯ ಪರೀಕ್ಷೆ ಜುಲೈ 3 ರಂದು ನಡೆಯಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.

ಈ ಬಾರಿಯ ಜೆಇಇ ಅಡ್ವಾನ್ಸ್ ಪರೀಕ್ಷೆಯನ್ನು ಐಐಟಿ‌ ಖರಗ್ ಪುರ್ ನಡೆಸಲಿದೆ ಎಂದು ಅವರು ಹೇಳಿದ್ದಾರೆ.

ಪಿಯುಸಿಯಲ್ಲಿ ಶೇ‌.75 ರ ಸರಾಸರಿಯಲ್ಲಿ ಪ್ರವೇಶ ನಡೆಯಲಿದೆ ಎಂದು ಟ್ವಿಟ್ಟರ್, ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.

ಫೆಬ್ರವರಿ ಮಾರ್ಚ್ ಮುಖ್ಯ ಪರೀಕ್ಷೆ:

ಜೆಇಇ ಮುಖ್ಯ ಪರೀಕ್ಷೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ನಾಲ್ಕು ಹಂತಗಳಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಐಐಟಿಗಳಲ್ಲಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಈ ಬಾರಿ ಹಲವು ರಿಯಾಯಿತಿ ನೀಡಲಾಗುವುದು ಎಂದು ಅವರು ಇದೇ ವೇಳೆ ಪ್ರಕಟಿಸಿದ್ದಾರೆ.

ಜೆಇಇ ಮುಖ್ಯ ಪರೀಕ್ಷೆ ಯನ್ನು ಕಂಪ್ಯುಟರ್ ಆಧಾರಿತ ಪರೀಕ್ಷೆ ಮಾದರಿಯಲ್ಲಿ ಈ ಬಾರಿ ಪರೀಕ್ಷೆ ‌ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಜೆಇಇ ಪರೀಕ್ಷೆಯಕ್ಕತ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಭೋಪಾಲ್ ನ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ , ಕೊಲ್ಕತ್ತಾ, ಮೊಹಾಲಿ, ಪುಣೆ, ತಿರುವನಂತಪುರಂ ಮತ್ತು ತಿರುಪತಿ ಯ ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನದ ಸಂಸ್ಥೆ,ರಾಯ್ ಬರೇಲಿಯ ರಾಜೀವ್ ಗಾಂಧಿ ಪೆಟ್ರೋಲಿಯಂ ತಂತ್ರಜ್ಞಾನ ಸಂಸ್ಥೆ, ವಿಶಾಖಪಟ್ಟಣಂ ನ ಪೆಟ್ರೋಲಿಯಂ ಮತ್ತು ಇಂಧನ ಸಂಸ್ಥೆ ಯಲ್ಲಿ ಪ್ರವೇಶ ಸಿಗಲಿದೆ.