ಜುಲೈ 22ರಂದು ಪತ್ರಿಕಾ ದಿನಾಚರಣೆ

ಧಾರವಾಡ,ಜು20 : ಧಾರವಾಡ ಜರ್ನಲಿಸ್ಟ್ ಗೀಲ್ಡ್‍ನ ವತಿಯಿಂದ ಜುಲೈ 22ರಂದು ಇಲ್ಲಿನ ರಂಗಾಯಣದ ಆವರಣದಲ್ಲಿರುವ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 10.30ಕ್ಕೆ ಹಿರಿಯ ಪತ್ರಕರ್ತರಾದ ಪಬ್ಲಿಕ್ ಆಪ್‍ನ್ಯೂಸ್ ಕರ್ನಾಟಕ ಮುಖ್ಯಸ್ಥ ಸುಭಾಷ ಹೂಗಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಂಯುಕ್ತ ಕರ್ನಾಟಕ ಪತ್ರಿಕೆ ಸಿಇಒ ಹಾಗೂ ಕಾರ್ಯನಿರ್ವಾಹಕ ಸಂಪಾದಕರಾದ ಹುಬ್ಬಳ್ಳಿಯ ಮೋಹನ್ ಹೆಗಡೆ ಅವರು ಪಾಲ್ಗೊಳ್ಳಲಿದ್ದಾರೆ. ವಾರ್ತಾ ಇಲಾಖೆ ಹಿರಿಯ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ ಅವರು ಉಪಸ್ಥಿತರಿರಲಿದ್ದು, ಧಾರವಾಡ ಜರ್ನಲಿಸ್ಟ್ ಗಿಲ್ಡ್‍ನ ಅಧ್ಯಕ್ಷರಾದ ಡಾ. ಬಸವರಾಜ ಹೊಂಗಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಪತ್ರಿಕೋದ್ಯಮ ಕುರಿತು ಸಂವಾದ: ಪತ್ರಿಕಾ ದಿನಾಚರಣೆ-2022 ರ ಅಂಗವಾಗಿ ಪತ್ರಿಕೋದ್ಯಮ ಮತ್ತು ಯುವ ಪತ್ರಕರ್ತರ ಮುಂದಿರುವ ಸವಾಲುಗಳು ಮತ್ತು ಪರಿಹಾರಗಳ ಕುರಿತು ಹಿರಿಯ ಪತ್ರಕರ್ತರು ಪತ್ರಿಕೋದ್ಯಮ ಪದವಿ ವಿದ್ಯಾರ್ಥಿಗಳ ಜೊತೆಗೆ ಸಂವಾದ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ. ವೆಬ್ ಮತ್ತು ಆಪ್ ಪತ್ರಿಕೋದ್ಯಮ ಕುರಿತು ಹಿರಿಯ ಪತ್ರಕರ್ತರಾದ ಸುಭಾಷ ಹೂಗಾರ ಹಾಗೂ ಅಪರಾಧ ಸುದ್ದಿಗಳು ಮತ್ತು ವಿಷಯ ವಿಶ್ಲೇಷಣೆ ಕುರಿತು ಹಿರಿಯ ಪತ್ರಕರ್ತರಾದ ಮೋಹನ್ ಹೆಗಡೆ ಅವರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಲಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು, ಕವಿವಿಯ ವಿದ್ಯುನ್ಮಾನ ಮಾಧ್ಯಮ ವಿಭಾಗದ ವಿದ್ಯಾರ್ಥಿಗಳು, ಎಸ್‍ಜೆಎಂವಿ ಮಹಾಂತ ಕಾಲೇಜಿನ ಪತ್ರಿಕೋಧ್ಯಮ ವಿದ್ಯಾರ್ಥಿಗಳು ಹಾಗೂ ಅಂಜುಮನ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿದ್ದಾರೆ ಎಂದು ಧಾರವಾಡ ಜರ್ನಲಿಸ್ಟ್ ಗೀಲ್ಡ್‍ನ ಕಾರ್ಯದರ್ಶಿ ಇ.ಎಸ್.ಸುಧೀಂದ್ರ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.