ಜುಲೈ 21 ರಂದು ಮೈಸೂರಿನಲ್ಲಿ ಗುರುವಂದನಾ ಕಾರ್ಯಕ್ರಮ

ಸಂಜೆವಾಣಿ ನ್ಯೂಸ್
ಮೈಸೂರು.ಜೂ.03:-ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಮಡಿವಾಳ ಸ್ವಾಮಿ ಮಠದಲ್ಲಿ ಆನೇಕಲ್ಲಿನ ರೇಣುಕಾರಾಧ್ಯ ಕಲಾ ಸಂಘದ ವತಿಯಿಂದ ಜುಲೈ 21 ರಂದು ಮೈಸೂರಿನ ಶಾರದಾ ವಿಲಾಸ್ ಶತಮಾನೋತ್ಸವ ಭವನದಲ್ಲಿ ನಡೆಯುವ ಮೈಸೂರು,ಚಾಮರಾಜನಗರ, ಮಂಡ್ಯ, ಚನ್ನಪಟ್ಟಣ,ರಾಮನಗರ, ಬೆಂಗಳೂರು, ಜಿಲ್ಲೆಗಳ ಹಿರಿಯ ರಂಗಭೂಮಿ ನಿರ್ದೇಶಕರುಗಳಿಗೆ, ಹಾಗೂ ಹಿರಿಯ ಸ್ತ್ರೀ ಪಾತ್ರಧಾರಿಗಳಿಗೆ, ಹಿರಿಯ ಪುರುಷ ಕಲಾವಿದರು ಗಳಿಗೆ, ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಇದರ ಪೂರ್ವಭಾವಿ ಸಭೆಯನ್ನು ನಡೆಸಿದರು.
ಈ ಸಭೆಯಲ್ಲಿ ಹಿರಿಯ ರಂಗಭೂಮಿ ನಿರ್ದೇಶಕರಾದ ಬೀರಿಹುಂಡಿ ಗೋವಿಂದರಾಜು,ಸುತ್ತೂರು ಗುರುಶಾಂತ,ಆನೇಕಲ್ಲಿನ ರೇಣುಕಾರದ್ಯ ಕಲಾಸಂಘದ ಅಧ್ಯಕ್ಷರಾದ ರೇಣುಕಾರಾಧ್ಯ, ರವರು ಸಂಘದ ಪದಾಧಿಕಾರಿಗಳಾದ ಮಹದೇಶ್, ಕುಪೇಂದ್ರ,ಶ್ರೀನಿವಾಸ್,ಹಿರಿಯರ ರಂಗಭೂಮಿ ಕಲಾವಿದರು ಚಿಕ್ಕಹಳ್ಳಿ ಪುಟ್ಟಣ್ಣ, ಕೆರೆಹಳ್ಳಿ ಬಿ ದೊರೆಸ್ವಾಮಿ, ನಿವೃತ್ತ ಪೆÇಲೀಸ್ ಅಧಿಕಾರಿಗಳಾದ ದೊಡ್ಡಹುಂಡಿ ಬಸವಣ್ಣ, ರಿಜ್ವಾನ್,ನಿವೃತ್ತ ಗುಂಡ್ಲುಪೇಟೆಯ ಜೆ ಎಸ್ ಎಸ್ ಕಾಲೇಜಿನ ಪ್ರಾಂಶುಪಾಲರಾದ ಮರಿಸ್ವಾಮಿ, ಕೆ ಜೆ ಮರಿಸ್ವಾಮಿ ನಾಯಕ, ವಸಂತ ಕುಮಾರ್,ಕಿರಗಸೂರು ಮಾದಪ್ಪ,ಪುರುಷೋತ್ತಮ್,ಕಾಳಿಸಿ ದ್ದನಹುಂಡಿ ಪರಸಿದ್ದೇಗೌಡ,ಸುತ್ತೂರು ನಾಗೇಶ್,ಚಕ್ರಪಾಣಿ, ಕೆಬ್ಬೆಹುಂಡಿ ಶಿವಕುಮಾರ್, ಬಾಗಳಿ ಮಹೇಶ್, ಕೆರೆಹಳ್ಳಿ ಡಿ ಲೋಹಿತ್,ಹೂಟಗಳ್ಳಿ ನಾಗರಾಜು, ಪಾಪಣ್ಣ, ಮಂಜುನಾಥ, ಹೊಸಕೋಟೆ ಪ್ರಭುಸ್ವಾಮಿ, ಶಿವಮಲ್ಲು, ಸುಂದರ,ಜಯಣ್ಣ,ಮುಳ್ಳೂರು ಪಾರ್ವತಪ್ಪ, ಪಿ ಡಿ ಓ ಸೋಮಶೇಖರ್,ಡಿ ಎಂ ಮಹದೇವು, ಪವನ್, ಅಭಿ, ಚಂದ್ರು,ಮುಂತಾದವರು ಉಪಸ್ಥಿತರಿದ್ದರು.