ಜುಲೈ 10 ಏಳು ರಾಜ್ಯಗಳ 13 ಕ್ಷೇತ್ರಗಳಿಗೆ ಉಪಸಮರ

ನವದೆಹಲಿ, ಜೂ. ೧೦- ಏಳು ರಾಜ್ಯಗಳ ೧೩ ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಬಿಹಾರ, ತಮಿಳುನಾಡು, ಮಧ್ಯಪ್ರದೇಶ, ರಾಜ್ಯಗಳಲ್ಲಿ ತಲಾ ೧, ಪಶ್ಚಿಮ ಬಂಗಾಳ ೪, ಉತ್ತಾರಖಂಡ, ಪಂಜಾಬ್, ಹಿಮಾಚಲ ಪ್ರದೇಶದ ತಲಾ ೨ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
ಜುಲೈ ೧೦ ರಂದು ಉಪಚುನಾವಣೆ ನಡೆಯಲಿದ್ದು, ಜುಲೈ ೧೩ ರಂದು ಮತ ಎಣಿಕೆ ನಡೆಯಲಿದೆ. ಜು. ೧೫ ರೊಳಗೆ ಉಪಚುನಾವಣೆಗಳು ಪೂರ್ಣಗೊಳಿಸಬೇಕೆಂದು ಚುನಾವಣಾ ಆಯೋಗ ತಿಳಿಸಿದೆ.
ಹಾಲಿ ಶಾಸಕರ ಮೃತಪಟ್ಟ ಹಿನ್ನೆಲೆಯಲ್ಲಿ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.