ಜುಲೈ ೫ ಕ್ಕೆ ಸಂಸದರ ಜನ್ಮದಿನ ಅದ್ದೂರಿ ಆಚರಣೆಗೆ ಸಿದ್ದತೆ

ದಾವಣಗೆರೆ. ಜೂ.೩೦; ಸಂಸದ ಜಿ.ಎಂ ಸಿದ್ದೇಶ್ವರ್ ಜನ್ಮದಿನದ ಪ್ರಯುಕ್ತ ಜುಲೈ ೫ ರಂದು ಬೆಳಗ್ಗೆ ೧೦.೩೦ ಕ್ಕೆ  ನಮ್ಮಭಿಮಾನ ಅದ್ದೂರಿ ಕಾರ್ಯಕ್ರಮವನ್ನು ಅಭಿಮಾನಿಗಳ ಬಳಗದಿಂದ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಮುಖಂಡ ಯಶವಂತ್ ರಾವ್ ಜಾಧವ್ ಮಾಹಿತಿ ನೀಡಿದರು.ನಗರದ ಪಿಬಿ ರಸ್ತೆಯಲ್ಲಿರುವ ವಾಣಿಹೋಂಡಾ ಶೋರೂಂ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿ.ಎಂ ಸಿದ್ದೇಶ್ವರ್  ಲೋಕಸಭಾ ಸದಸ್ಯರಾಗಿ ೨೦ ವರ್ಷವಾಗಿದೆ.ಇಷ್ಟು ಸುಧೀರ್ಘ ಅವಧಿಗೆ ಅವರು ಸಂಸದರಾಗಿದ್ದಾರೆ ಆದ್ದರಿಂದ ಜುಲೈ ೫ ರಂದು ನಡೆಯಲಿರುವ ಕಾರ್ಯಕ್ರಮದ‌ಲ್ಲಿ ಅವರನ್ನು ಅಭಿನಂದಿಸಲಾಗುವುದು.ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೆರವೇರಿಸಲಿದ್ದಾರೆ.ಇದೇ ವೇಳೆ ಪೌರ ಕಾರ್ಮಿಕರಿಗೆ ಸನ್ಮಾನ,ಕ್ರೀಡಾಪಟುಗಳಿಗೆ ಸನ್ಮಾನ,ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ಸನ್ಮಾನ ಮಾಡಲಾಗುವುದು ಎಂದರು.ಮಾಜಿ ಸಚಿವರಾದ ಎಸ್.ಎ ರವೀಂದ್ರನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ,ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ,ಎ.ನಾರಾಯಣಸ್ವಾಮಿ,ಮಾಜಿ ಸಚಿವರುಗಳಾದ ಕೆ.ಎಸ್ ಈಶ್ವರಪ್ಪ,ಶ್ರೀರಾಮುಲು,ಮುರುಗೇಶ್ ನಿರಾಣಿ ಸೇರಿದಂತೆ ರಾಜ್ಯದ ಹಲವು ಬಿಜೆಪಿ ಮುಖಂಡರು ಆಗಮಿಸಲಿದ್ದಾರೆಕಾರ್ಯಕ್ರಮದಲ್ಲಿ ಸುಮಾರು ೨೦ ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ ಜು.೫ ರಂದು ಬೆಳಗ್ಗೆ ಗೋಶಾಲೆಗೆ ತೆರಳಿ ಗೋವುಗಳಿಗೆ ಮೇವು ವಿತರಣೆ ಮಾಡಲಾಗುವುದು ನಂತರ ನಗರದೇವತೆ ದುರ್ಗಾಂಭಿಕಾ ದೇವಿಗೆ ಸಂಸದರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ  ಬಿ.ಎಸ್. ಜಗದೀಶ್, ಶ್ರೀನಿವಾಸ್ ದಾಸಕರಿಯಪ್ಪ, ಎ.ವೈ. ಪ್ರಕಾಶ್,  ಬಿ.ಜಿ. ಅಜಯ್ ಕುಮಾರ್, ನಾಗರಾಜ್ ಸಿರಿಗೆರೆ, ಹೆಚ್.ಎನ್. ಶಿವಕುಮಾರ್, ಕೊಂಡಜ್ಜಿ ಜಯಪ್ರಕಾಶ್,  ಜಿ.ಎಸ್. ಶ್ಯಾಮ್, ಎನ್. ರಾಜಶೇಖರ್, ದೇವರಮನಿ ಶಿವಕುಮಾರ್, ಜೀವನ್ ಮೂರ್ತಿ, ರಾಜನಹಳ್ಳಿ ಶಿವಕುಮಾರ್, ಸೋಗಿ ಶಾಂತಗುಮಾರ್, ಎಲ್.ಡಿ. ಗೋಣೆಪ್ಪ, ರಮೇಶ್, ಕಿಶೋರ್ ಕುಮಾರ್ ಉಪಸ್ಥಿತರಿದ್ದರು.