ಜುಲೈ ೪ರೊಳಗಾಗಿ ಮತದಾರರ ಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸಿ: ಚಂದ್ರಕಾಂತ್ ಎಲ್.ಡಿ

ಮಾನ್ವಿ ಜೂ ೨೮ :- ಕರ್ನಾಟಕ ರಾಜ್ಯ ಚುನಾವಣ ಆಯೋಗದ ನಿರ್ದೇಶನದಂತೆ ಮುಂಬರುವ ಮಾನ್ವಿ ತಾಲೂಕಿನ ವ್ಯಾಪ್ತಿಯ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸಾರ್ವತ್ರಿಕ ಚುನಾವಣೆ-೨೦೨೩ರ ಕರಡು ಮತದಾರರ ಪಟ್ಟಿಯನ್ನು ಜೂ.೨೩ರಂದು ಪ್ರಚೂರ ಪಡಿಸಲಾಗಿದ್ದು ಸದರಿ ಕರಡು ಮತದಾರರ ಪಟ್ಟಿಗೆ ಜುಲೈ ೪ರ ಒಳಗಾಗಿ ಈ ಕಾರ್ಯಲಯದಲ್ಲಿ ಸಾರ್ವಜನಿಕರು ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ತಹಸೀಲ್ದಾರ್ ಚಂದ್ರಕಾಂತ್ ಎಲ್.ಡಿ ಪ್ರಕಟಣೆಯಲ್ಲಿ ಕೋರಿದರೆ.