ದಾವಣಗೆರೆ.ಜೂ.೧೮: ಕರ್ನಾಟಕ ರಾಜ್ಯ ಪವರ್ ಲಿಫ್ಟರ್ಸ್ ಅಸೋಸಿಯೇಷನ್ ದಾವಣಗೆರೆ ಹಾಗೂ ಅಲ್ಫಾ ಸರ್ಕ್ಯೂಟ್ ಸಂಸ್ಥೆಯ ಶ್ರೀ ಮಹೇಶ್ವರಪ್ಪ ಚಂದ್ರಮೋಹನ್ ಮತ್ತು ಬೆಂಗಳೂರು ಜಿಲ್ಲಾ ಪವರ್ ಲಿಫ್ಟರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ದಿ. ದಯಾನಂದ್ ಕಿಚಿಡಿ ಅಂತಾರಾಷ್ಟ್ರೀಯ ಕ್ರೀಡಾಪಟು ಸ್ಪೆಷಲ್ ಒಲಿಂಪಿಕ್ ಭಾರತ್ ಕೋಚ್ ಇವರ ಹುಟ್ಟುಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು ಎಂದು ರಾಜ್ಯ ಕಾರ್ಯದರ್ಶಿ ಲಕ್ಷ್ಮೀದೇವಿ ದಯಾನಂದ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ ೧ ಹಾಗೂ ೨ರಂದು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿರುವ ದಿನೇಶ್ ನಾಟ್ಯಾಲಯದಲ್ಲಿ ಸ್ಪರ್ಧೆಗಳು ನಡೆಯಲಿದೆ. ಸ್ಕ್ವಾಟ್,ಬೆಂಚ್ ಪ್ರೆಸ್,ಡೆಡ್ ಲಿಫ್ಟ್ ಹಾಗೂ ಪ್ರತ್ಯೇಕವಾಗಿ ಬೆಂಚ್ ಪ್ರೆಸ್ ಮತ್ತು ಪ್ರತ್ಯೇಕವಾಗಿ ಡೆಡ್ ಲಿಫ್ಟ್ ೩ ಸ್ಪರ್ಧೆಗಳನ್ನು ನಡೆಸಲಾಗುವುದು.ಅಕ್ಟೋಬರ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು ಆಸಕ್ತ ಕ್ರೀಡಾಪಟುಗಳು ಆನ್ ಲೈನ್ ಮೂಲಕ Email id; ksplar2011@gmail.com ಗೆ ದಾಖಲಾತಿಗಳನ್ನು ಕಳುಹಿಸಬಹುದಾಗಿದೆ ಎಂದರು.ಜುಲೈ ೧ ರಂದು ನಡೆಯುವ ಕಾರ್ಯಕ್ರಮಕ್ಕೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಚಾಲನೆ ನೀಡಲಿದ್ದಾರೆ.ಅಸೋಸಿಯೇಷನ್ ನ ಎಸ್ .ವಿ ರಾಮಚಂದ್ರ ಹಾಗೂ ದಿನೇಶ್ ಕೆ ಶೆಟ್ಟಿ ಆಗಮಿಸಲಿದ್ದಾರೆ.ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಕ್ರೀಡಾಪಟುಗಳು ಆಗಮಿಸಲಿದ್ದಾರೆ.ನಾಲ್ಕು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.ಜುಲೈ ೨ ರಂದು ಸಂಜೆ ಸಮಾರೋಪ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 7349517372,8073484630,9480720828,9880514889 ಇಲ್ಲಿಗೆ ಸಂಪರ್ಕಿಸಬಹುದು ಎಂದರುಸುದ್ದಿಗೋಷ್ಠಿಯಲ್ಲಿ ದಿನೇಶ್ ಕೆ ಶೆಟ್ಟಿ,ಶಶಿಧರ್ ಹಾಲೇಕಲ್,ಫಕೃದ್ದೀನ್,ಶಿವರತನ್ ,ಹನುಮಂತಪ್ಪ ಇದ್ದರು.