ಜುಲೈ ನಲ್ಲಿ ಸರಾಸರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ನವದೆಹಲಿ,ಜು.1- ವಾಯುವ್ಯ ಭಾರತ ಹೊರತುಪಡಿಸಿ ಜುಲೈ ತಿಂಗಳಲ್ಲಿ ‘ಸಾಮಾನ್ಯ’ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜುಲೈ ತಿಂಗಳಲ್ಲಿ  ಒಟ್ಟಾರೆಯಾಗಿ ದೇಶದಾದ್ಯಂತ  ಮುಂಗಾರು  ಮಳೆಯ ಸರಾಸರಿಯ  ಜೂನ್‌ ತಿಂಗಳಿನಲ್ಲಿ ಆದ ಮಳೆಗಿಂತ ಶೇ. 10 ರಷ್ಟು ಮಳೆ ಕೊರತೆಯೊಂದಿಗೆ ‘ಸಾಮಾನ್ಯಕ್ಕಿಂತ ಕಡಿಮೆ’ ಮಳೆಯಾಗಲಿದೆ ‘ ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದೆ.

ಮಳೆಯ ಕೊರತೆಯಿಂದ ದೇಶದಲ್ಲಿ  ಬಿತ್ತನೆ ಮೇಲೆ ಪರಿಣಾಮ ಬೀರಲಿದೆ. ಋತುಮಾನದ ಮಳೆಯ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುವ ‘ ಮುಂಗಾರು ಮಳೆ ಕೊರತೆ ಕೃಷಿ ಮೇಲೆ ಪರಿಣಾಮ ಬೀರುವ ಸಾದ್ಯತೆ ಇದೆ ಎನ್ನಲಾಗಿದೆ‌

ಜುಲೈನಲ್ಲಿ ಮುಂಗಾರುವ  ಬಹುಶಃ ದೇಶದಲ್ಲಿ ಸಾಮಾನ್ಯ ಎಙದು ನಿರೀಕ್ಷಿಸಲಾಗಿದೆಯಾದರೂ,  ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶಗಳಲ್ಲಿ ಮಳೆಯಾಗಬಗುದು ಎಂದು ಅಂದಾಜು ಮಾಡಿದೆ.

ಜುಲೈನಲ್ಲಿ ಮಳೆಯ ಪ್ರಾದೇಶಿಕ ಹಂಚಿಕೆಯು ಮಧ್ಯ ಭಾರತ ಮತ್ತು ಪಕ್ಕದ ದಕ್ಷಿಣ ಪರ್ಯಾಯ ದ್ವೀಪ ಮತ್ತು ಪೂರ್ವ ಭಾರತ ಮತ್ತು ಈಶಾನ್ಯ ಮತ್ತು ವಾಯುವ್ಯ ಭಾರತದ ಕೆಲವು ಪ್ರದೇಶಗಳಲ್ಲಿ ‘ಸಾಮಾನ್ಯದಿಂದ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ’ಯಾಗಲಿದೆ  ಎಂದು ತಿಳಿಸಿದೆ.

ವ್ಯತಿರಿಕ್ತವಾಗಿ, ವಾಯುವ್ಯ, ಈಶಾನ್ಯ ಮತ್ತು ಆಗ್ನೇಯ ಪರ್ಯಾಯದ್ವೀಪದ ಭಾರತದ ಅನೇಕ ಪ್ರದೇಶಗಳಲ್ಲಿ ‘ಸಾಮಾನ್ಯಕ್ಕಿಂತ ಕಡಿಮೆ’ ಮಳೆಗಿಂತ “ಹೆಚ್ಚಾಗಿ” ಮಳೆಯಾಗುವ ಸಾದ್ಯತೆಗಳಿವೆ ಎಂದು ತಿಳಿಸಿದೆ.

ಗರಿಷ್ಠ ತಾಪಮಾನ

ಜುಲೈನಲ್ಲಿನ ತಾಪಮಾನದ ಮೇಲೆ, ವಾಯುವ್ಯ ಮತ್ತು ಪರ್ಯಾಯ ಭಾರತದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ‘ಸಾಮಾನ್ಯದಿಂದ ಸಾಮಾನ್ಯಕ್ಕಿಂತ ಹೆಚ್ಚಿನ’ ಗರಿಷ್ಠ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನೀರಾವರಿ ಜಾಲಗಳು ಮತ್ತು ಅಂತರ್ಜಲದ ಮೇಲಿನ ಅವಲಂಬನೆ ಗಮನದಲ್ಲಿಟ್ಟುಕೊಂಡು ರೈತರು ತಮ್ಮ ಬೆಳೆಗಳನ್ನು ಆಯ್ಕೆ ಮಾಡಲು ಮುನ್ಸೂಚನೆ ನೀಡಿದೆ.