ಜುಲೈನಲ್ಲಿ ಫೈಜರ್ ಭಾರತಕ್ಕೆ


ನವದೆಹಲಿ, ಮೇ.೨೮- ಕೊರೋನಾ ಸೋಂಕಿಗೆ ಅಭಿವೃದ್ಧಿಪಡಿಸಲಾಗಿರುವ ಅಮೇರಿಕಾದ ಫೈಜರ್ ಸಂಸ್ಥೆಯ ಲಸಿಕೆ ಜುಲೈ ತಿಂಗಳಲ್ಲಿ ಸ್ವಲ್ಪ ಪ್ರಮಾಣದ ಲಸಿಕೆ ಬರುವ ಸಾಧ್ಯತೆಗಳು ಇವೆ.
ಫೈಜರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಯ ದರ ನಿಗದಿ ಕುರಿತು ಇನ್ನೂ ಅಂತಿಮ ವಾಗದ ಹಿನ್ನೆಲೆಯಲ್ಲಿ ಭಾರತೀಯ ಔಷದ ಮಹಾನಿಯಂತ್ರಕ- ಡಿಜಿಸಿಐ ಲಸಿಕೆಗೆ ಅನುಮತಿ ನೀಡಿಲ್ಲ. ಹೀಗಾಗಿ ಲಸಿಕೆ ದೇಶಕ್ಕೆ ಬರುವುದು ಇನ್ನಷ್ಟು ದಿನಗಳ ಕಾಲ ತಡವಾಗುವ ಸಾಧ್ಯತೆಗಳಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾರ್ಯಪಡೆಯ ಅಧ್ಯಕ್ಷ ಡಾ.ವಿ.ಕೆ ಪಾಲ್, ಅಮೆರಿಕದ ಔಷಧ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಯ ಕುರಿತು ಇನ್ನಷ್ಟು ಪರಿಶೀಲನೆ ನಡೆಸಲಾಗುವುದು ಈ ಲಸಿಕೆ ಪಡೆಯುವುದರಿಂದ ಅಡ್ಡ ಪರಿಣಾಮ ಬೀರಲಿದೆ ಅಥವಾ ಇಲ್ಲವೇ ಎನ್ನುವುದನ್ನು ಖಚಿತಪಡಿಸಿಕೊಂಡು ಲಸಿಕೆ ಅಮದು ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಲಸಿಕೆಯ ಕುರಿತು ದರ ನಿಗದಿ ಇನ್ನೂ ಅಂತಿಮವಾಗಿಲ್ಲ ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಜುಲೈ ತಿಂಗಳಿನಿಂದ ಅಲ್ಪಪ್ರಮಾಣದಲ್ಲಿ ಲಸಿಕೆ ದೇಶಕ್ಕೆ ಬರಲಿದ್ದು ಆನಂತರ ಮಾತುಕತೆ ಪೂರ್ಣಗೊಂಡು ಲಸಿಕೆ ಯಾವುದೇ ಅಡ್ಡ ಪರಿಣಾಮ ಬೀರದಿದ್ದರೆ ಪೈಜರ್ ಸಂಸ್ಥೆಯ ಲಸಿಕೆಯನ್ನು ದೇಶಕ್ಕೆ ತರಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಫೈಜರ್ ಲಸಿಕೆಯ ದರ ನಿಗದಿ ಕುರಿತಂತೆ ಭಾರತ ಮತ್ತು ಅಮೆರಿಕ ನಡುವೆ ಮಾತುಕತೆ ನಡೆಯುತ್ತಿದೆ. ಇದರ ಬಗ್ಗೆ ಅಂತಿಮ ನಿರ್ಧಾರ ವಾದ ಬಳಿಕ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ ಎಂದು ಅವರು ಹೇಳಿದ್ದಾರೆ.
ಫೈಜರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ದೇಶಕ್ಕೆ ಆಮದು ಮಾಡಿಕೊಂಡರೆ ಅದನ್ನು ಸಂಗ್ರಹ ಮಾಡುವ ಸಾಮರ್ಥ್ಯ ದೇಶದಲ್ಲಿ ವ್ಯವಸ್ಥೆ ಮಾಡುವ ಕುರಿತಂತೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ಅನುಕೂಲವಾಗುವಂತೆ ವಿಶ್ವದ ಪ್ರಮುಖ ಔಷಧ ತಯಾರಿಕಾ ಸಂಸ್ಥೆಗಳಿಂದ ಲಸಿಕೆಯನ್ನು ಆಮದು ಮಾಡಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಎಲ್ಲ ಪ್ರಯತ್ನಗಳು ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.