ಜುಮ್ಮೋಬನಹಳ್ಳಿ ಗ್ರಾ.ಪಂ.ಅಧ್ಯಕ್ಷರಾಗಿ ಇಂದು ಲೋಕಿಕೆರೆ ದುರುಗಮ್ಮದುರುಗಪ್ಪ ಅವಿರೋಧ ಆಯ್ಕೆ.

ಕೂಡ್ಲಿಗಿ.ನ. 10 :- ಜುಮ್ಮೋಬನಹಳ್ಳಿ ಗ್ರಾಮಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಲೋಕಿಕೆರೆ ದುರುಗಮ್ಮದುರುಗಪ್ಪ ಅವರು ಇಂದು ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂದು ನಡೆದ ಅಧ್ಯಕ್ಷರ ಆಯ್ಕೆ ಚುನಾವಣಾ ಪ್ರಕ್ರಿಯೆಯಲ್ಲಿ ಲೋಕಿಕೆರೆ ದುರುಗಮ್ಮ ದುರುಗಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೂಡ್ಲಿಗಿ ತಹಸೀಲ್ದಾರ್ ಟಿ. ಜಗದೀಶ್ ಘೋಷಿಸಿದ್ದಾರೆ.

ಅನುಸೂಚಿತ ಜಾತಿ ಮಹಿಳೆ ಮೀಸಲಾತಿಯಲ್ಲಿ ಈ ಹಿಂದೆ ಅಧ್ಯಕ್ಷೆಯಾಗಿದ್ದ ಚನ್ನಬಸಮ್ಮ ಅವರು ಸೆಪ್ಟೆಂಬರ್ 26ರಂದು ತಮ್ಮ ಅಧ್ಯಕ್ಷ ಸ್ಥಾನಕ್ಕೆ ವೈಯಕ್ತಿಕವಾಗಿ ರಾಜೀನಾಮೆ ಸಲ್ಲಿಸಿದ್ದರಿಂದ ಆ ಸ್ಥಾನ ತೆರವಾಗಿತ್ತು.ಇದರಿಂದ ನೂತನ ಅಧ್ಯಕ್ಷರ ಸ್ಥಾನದ ಆಯ್ಕೆಗೆ ಚುನಾವಣಾ ಪ್ರಕ್ರಿಯೆ ನಡೆಸುವಂತೆ ವಿಜಯನಗರ ಜಿಲ್ಲಾಧಿಕಾರಿಗಳ ಆದೇಶದಂತೆ ಕೂಡ್ಲಿಗಿ ತಹಸೀಲ್ದಾರ್ ಟಿ ಜಗದೀಶ ಅವರು ನಿಗದಿಪಡಿಸಿದಂತೆ ಅಧ್ಯಕ್ಷ ಸ್ಥಾನದ ಚುನಾವಣೆ ಇಂದು ನಡೆಸಲಾಗಿ ಚುನಾವಣಾ ಪ್ರಕ್ರಿಯೆಯಂತೆ ಅಧ್ಯಕ್ಷ ಸ್ಥಾನಕ್ಕೆ ಲೋಕಿಕೆರೆ ಕ್ಷೇತ್ರದ ಸದಸ್ಯೆ ದುರುಗಮ್ಮ ದುರುಗಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇವರ ಆಯ್ಕೆಯನ್ನು ಅವಿರೋಧ ಆಯ್ಕೆ ಎಂದು ತಹಸೀಲ್ದಾರ್ ಟಿ ಜಗದೀಶ್ ಘೋಷಿಸಿದರು.

ಒಟ್ಟು 19 ಸದಸ್ಯರ ಬಲಾಬಲ ಹೊಂದಿರುವ ಜುಮ್ಮೋಬನಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಇಂದು 18 ಸದಸ್ಯರುಗಳು ಹಾಜರಾಗಿದ್ದರು ಒಬ್ಬ ಸದಸ್ಯ ಗೈರು ಹಾಜರಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ದುರುಗಮ್ಮದುರುಗಪ್ಪ ಗೆ ಸದಸ್ಯೆ ಜುಮ್ಮೋಬನಹಳ್ಳಿ ತಿಪ್ಪಮ್ಮ ಸೂಚಕರಾಗಿದ್ದರು. ಈ ಸಂದರ್ಭದಲ್ಲಿ ಜುಮ್ಮೋಬನಹಳ್ಳಿ ಕಾಂಗ್ರೇಸ್ ಮುಖಂಡ ಜಿ ಓಬಣ್ಣ, ಲೋಕಿಕೆರೆ ಲಕ್ಕಜ್ಜಿ ಮಲ್ಲಿಕಾರ್ಜುನ, ಕಲ್ಲಹಳ್ಳಿ ವೆಂಕಟೇಶ, ಹಾಗೂ ಇತರರು ಇತರಿದ್ದರು.

ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಟಿ. ಜಗದೀಶ್ ಆಗಮಿಸಿದ್ದರು ಸಹಾಯಕರಾಗಿ ಕೂಡ್ಲಿಗಿ ಕಂದಾಯ ಇಲಾಖೆಯ ಚುನಾವಣಾ ಸಿಬ್ಬಂದಿಗಳಾದ ಶಿವುಕುಮಾರ್ , ಜುಮ್ಮೋಬನಹಳ್ಳಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾಂತೇಶ ಹಾಗೂ ಇತರರು ಉಪಸ್ಥಿತರಿದ್ದರು.