ಜುಮ್ಮೋಬನಹಳ್ಳಿ ಗ್ರಾಪಂ ಉಪಾಧ್ಯಕ್ಷರಾಗಿ ತಿಪ್ಪಮ್ಮನಾಗರಾಜ ಅವಿರೋಧ ಆಯ್ಕೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು.31: -ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿಗೆ  ಉಪಾಧ್ಯಕ್ಷರಾಗಿ ತಿಪ್ಪಮ್ಮ ಗೊಂಚಿಗಾರ ನಾಗರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಉಪಾಧ್ಯಕ್ಷೆ ಗಂಗಮ್ಮ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶನಿವಾರ ಚುನಾವಣೆ  ನಡೆದಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ತಿಪ್ಪಮ್ಮ ಗೊಂಚಿಗಾರ ನಾಗರಾಜ್ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ, ತಿಪ್ಪಮ್ಮ ಗೊಂಚಿಗಾರ ನಾಗರಾಜ ಅವರು  ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು  ಚುನಾವಣಾಧಿಕಾರಿ ಹಾಗೂ ಕೂಡ್ಲಿಗಿ ತಹಸೀಲ್ದಾರ್ ಟಿ. ಜಗದೀಶ್ ಅವರು ಘೋಷಿಸಿದರು.
ಗ್ರಾಮ ಪಂಚಾಯಿತಿಯ ಒಟ್ಟು 19 ಸದಸ್ಯರ ಪೈಕಿ 18 ಜನರು ಹಾಜರಿದ್ದರು. ಈ ಸಂದರ್ಭದಲ್ಲಿ
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚನ್ನಬಸಮ್ಮ ಬಸಣ್ಣ, ಪಿಡಿಒ ಮಹಾಂತೇಶ್, ಕಂದಾಯ ನಿರೀಕ್ಷಕ ಮುರಳಿಕೃಷ್ಣ, ಈಶಪ್ಪ,  ಶಿವಕುಮಾರ ಸೇರಿ ಗ್ರಾಪಂ ಸಿಬ್ಬಂದಿ ಇದ್ದರು.
ಜುಮ್ಮೋಬನಹಳ್ಳಿ ಗ್ರಾಪಂಗೆ ಉಪಾಧ್ಯಕ್ಷರಾಗಿ ತಿಪ್ಪಮ್ಮ ಗೊಂಚಿಗಾರ ನಾಗರಾಜ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಕ್ಕೆ ಅನೇಕ ಮುಖಂಡರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದು  ಈ ಸಂದರ್ಭದಲ್ಲಿ ಕೆಪಿಸಿಸಿ ಮುಖಂಡ ಗುಜ್ಜಲ್ ರಘು, ಜಿಲ್ಲಾ ಕಾಂಗ್ರೆಸ್ ಮುಖಂಡರಾದ  ಜೆ.ಮ್ಯಾಸರಹಟ್ಟಿ ಜಿ.ಓಬಣ್ಣ, ಕಾನಹೊಸಹಳ್ಳಿಯ  ಕುಲುಮೆಹಟ್ಟಿ ಸೂರ್ಯಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷ ಶರಣೇಶ್, ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಸಹ ಸಂಚಾಲಕ ಸಿ.ಅರುಣ್ ಕುಮಾರ್, ಗೋಪಾಲಿ, ಎ.ರಾಜಣ್ಣ ಇತರರಿದ್ದರು.