ಜುಮ್ಮೋಬನಹಳ್ಳಿಲಿ  ಶ್ರೀಮಲಿಯಮ್ಮ ಜಾತ್ರೆ,
ಇಂದು ದೇವಿ ಸನ್ನಿದಿಯಲ್ಲಿ ಪೋತರಾಜರ ಕುಣಿತ.


ಕೂಡ್ಲಿಗಿ.ಜ. 12 :- ತಾಲೂಕಿನ ಜುಮ್ಮೋಬನಹಳ್ಳಿಯಲ್ಲಿ ಗ್ರಾಮದೇವತೆ ಶ್ರೀ ಮಲಿಯಮ್ಮ ದೇವಿ ಜಾತ್ರಾ ಮಹೋತ್ಸವವು ಮಂಗಳವಾರದಿಂದ ಮೂರು ದಿನದ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದ್ದು  ಕೊನೆಯ ದಿನವಾದ ಇಂದು  ಸಂಜೆ 4.30 ಗಂಟೆಗೆ ದಾವಣಗೆರೆ ಜಿಲ್ಲೆಯ ಆಕನೂರು ಗ್ರಾಮದ ಪೋತರಾಜರ ಮೆರವಣಿಗೆ, ಕುಣಿತ, ಗಾವು ಕಾರ್ಯಕ್ರಮ ನಡೆಯಲಿದ್ದು  ನೋಡಲು ಇಡೀ ಜನಸಾಗರವೇ ಸೇರಲಿದೆ.
 ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ದೇವಸ್ಥಾನದಿಂದ ಶ್ರೀ ಮಲಿಯಮ್ಮ ದೇವಿಯ ಉತ್ಸವ ಮೂರ್ತಿಯನ್ನು ಗಂಗೆಪೂಜೆಗೆ ಕೊಂಡೊಯ್ದು ಪೂಜಾ ಕಾರ್ಯಗಳನ್ನು ಸಂಪ್ರದಾಯದಂತೆ ನೆರವೇರಿಸಲಾಯಿತು.  ರಾತ್ರಿ 10 ಗಂಟೆಯಿಂದ ಬೆಳಗಿನಜಾವ 4 ಗಂಟೆಯವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಉತ್ಸವ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ನಡೆಸಲಾಯಿತು ಹಾಗೂ  ಬುಧವಾರ ದೇವಿಗೆ ಭಕ್ತಾಧಿಗಳು ತಮ್ಮ ಹರಕೆ ತೀರಿಸಿಕೊಂಡರು.
ಈ ಸಂದರ್ಭದಲ್ಲಿ ಜುಮ್ಮೋಬನಹಳ್ಳಿ ಹಾಗೂ ಜೆ.ಮ್ಯಾಸರಹಟ್ಟಿ ದೈವಸ್ಥರು, ಭಕ್ತಾಧಿಗಳು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದು, ನಾಳೆ ಬೆಳಗ್ಗೆ ದೇವಿಯ ಉತ್ಸವಮೂರ್ತಿಯನ್ನು ಗುಡಿ ತುಂಬಿಸುವ ಕಾರ್ಯ ಜರುಗಲಿದೆ. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಸಿದ್ದರು