ಜುಮನಾಳ ಕ್ರಾಸ್ ಬಳಿ ಭೀಕರ ಅಪಘಾತ: ನಾಗಠಾಣ ಶಾಸಕರ ಅಳಿಯ ಸೇರಿ ನಾಲ್ವರ ಸಾವು

ವಿಜಯಪುರ,ನ.29-ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಫಾಚ್ರ್ಯೂನರ್ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜುಮನಾಳ ಕ್ರಾಸ್ ಬಳಿ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ನಾಗಠಾಣ ಶಾಸಕ ಡಾ.ದೇವಾನಂದ ಚವ್ಹಾಣ ಅವರ ಅಳಿಯ ವಿಜಯಕುಮಾರ ದೊಡಮನಿ (40), ಸೊಲ್ಲಾಪುರದ ನಾಂದೇವಾಡದ ಚಿದನಾಂದ ನಾಗೇಶ ಸೂರ್ಯವಂಶಿ (45), ಸೋಮನಾಥ ಕಾಳೆ (43), ಸಂದೀಪ ಪವಾರ (40) ಎಂದು ಗುರುತಿಸಲಾಗಿದೆ.
ಅಪಘಾತಕ್ಕೀಡಾದ ಪಾರ್ಚೂನರ್ ಕಾರು ಮಹಾರಾಷ್ಟ್ರ ನೋಂದಣಿ ಸಂಖ್ಯೆ ಹೊಂದಿದ್ದು, ಅಪಘಾತದ ತೀವ್ರತೆಯಿಂದಾಗಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಕಾರಿನಲ್ಲಿದ್ದವರು ನಿಶ್ಚಿತಾರ್ಥ ಕಾರ್ಯಕ್ಕೆ ನರಗುಂದದಿಂದ ವಿಜಯಪುರಕ್ಕೆ ಆಗಮಿಸಿ ವಾಪಾಸ್ಸು ನರಗುಂದಕ್ಕೆ ಪ್ರಯಾಣ ಬೆಳೆಸಿದ್ದರು, ಬಸ್ ನರಗುಂದದತ್ತ ಪ್ರಯಾಣ ಬೆಳೆಸಿತ್ತು. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಸ್ಥಳಕ್ಕೆ ಗ್ರಾಮೀಣ ಪೆÇಲೀಸ್ ಠಾಣೆ ಪೆÇಲೀಸರು ಭೇಟಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.