ಜುಗಲ್ ಬಂಧಿ ಆರಂಭದಲ್ಲೇ ಶುಭಾರಂಭ….

“ಜುಗಲ್ ಬಂಧಿ” ಸಿನಿಮಾ ಮುಹೂರ್ತ ಆಚರಿಸಿಕೊಂಡ ಬೆನ್ನಲ್ಲೇ ಆಡಿಯೋ ಹಕ್ಕು ಮಾರಾಟವಾಗಿದೆ. ದಿವಾಕರ್ ಡಿಂಡಿಮ ಆಕ್ಷನ್ ಕಟ್ ಹೇಳಿ ನಿರ್ಮಾಣ ಮಾಡಲು ಸಜ್ಜಾಗಿರುವ “ಜುಗಲ್ ಬಂದಿ “ಚಿತ್ರದ ಆಡಿಯೋ ಹಕ್ಕು ಬಾರಿ ಮೊತ್ತಕ್ಕೆ ಮಾರಾಟವಾಗಿದೆ.

ಥ್ರಿಲ್ಲರ್ ಸಬ್ಜೆಕ್ಟ್ ಹೊಂದಿರುವ ಜುಗಲ್ ಬಂದಿ ಚಿತ್ರ ಮುಹೂರ್ತದ ಬಳಿಕ ಚಿತ್ರೀಕರಣ ಆರಂಭಿಸಿದೆ. ನಾಯಕ ಯಶ್ ಶೆಟ್ಟಿ, ಸಂತೋಷ್ ಅಶ್ರಯ್, ಅಶ್ವಿನ್  ರಾವ್ ಪಲ್ಲಕ್ಕಿ, ಅರ್ಚನಾ ಕೊಟ್ಟಿಗೆ ಮಾನಸಿ ಸುಧೀರ್ ಹಲವು ಮಂದಿ ಮುಹೂರ್ತದಲ್ಲಿ ಪಾಲ್ಗೊಂಡಿದ್ದರು.

 ಸಿನಿಮಾಗೆ ಪ್ರದ್ಯೋತನ್ ಸಂಗೀತ, ಎಸ್ ಕೆ ರಾವ್ ಕ್ಯಾಮೆರಾ ಚಿತ್ರಕ್ಕಿದೆ. ಮೊದಲ ಹಂತ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗುವುದು ಸ್ವಲ್ಪ ದಿನದ ನಂತರ ಎರಡನೇ ಹಂತದ ಚಿತ್ರೀಕರಣವನ್ನು ಬೆಂಗಳೂರುಲ್ಲಿ ಚಿತ್ರೀಕರಣ ಮಾಡುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು ನಿರ್ದೇಶಕ-ನಿರ್ಮಾಪಕ ದಿವಾಕರ್ ಡಿಂಡಿಮ.

ತಾಯಿ ಮಗನ ಸೆಂಟಿಮೆಂಟ್ ಹುಡುಗ ಹುಡುಗಿಯ ಪ್ರೀತಿ ಮತ್ತು ಮತ್ತೊಂದು ವಿಧದ ಕಥೆ ಸೇರಿ ಮೂರು ಹಂತದಲ್ಲಿ ಕಥೆ ಸಾಗಲಿದೆ ಇವೆಲ್ಲವೂ ಒಂದು ಕಡೆ ಬಂದರೆ ಏನಾಗಲಿದೆ ಎಂಬುದು ಚಿತ್ರದ ತಿರುಳು. ಮಳೆ ನಂತರ ವರ್ಷಾಂತ್ಯದ ವೇಳೆಗೆ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿ ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ತೆರೆಗೆ ತರುವ ಉದ್ದೇಶ ಹೊಂದಲಾಗಿದೆ ಎಂದರು.