ಜೀವ ಸಂಕುಲಗಳ ಉಳಿವಿನ ಬಗ್ಗೆ ಯುವಜನರು ಆಸಕ್ತಿ ಬೆಳೆಸಿಕೊಳ್ಳಬೇಕು

ಮಂಡ್ಯ : ಏ.23:- ಜೀವ ಸಂಕುಲಗಳ ಉಳಿವಿನ ಬಗ್ಗೆ ವಿದ್ಯಾರ್ಥಿ ಯುವಜನರು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಅರಣ್ಯ ಇಲಾಖೆಯ ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಎಂ. ಅಣ್ಣಯ್ಯ ತಿಳಿಸಿದರು.
ತಾಲೂಕಿನ ಹುಲಿಕೆರೆ ಮೀಸಲು ಅರಣ್ಯದಲ್ಲಿ ಕರ್ನಾಟಕ ರಾಷ್ಟ್ರೀಯ ಸೇವಾ ಯೋಜನಾ ಕೋಶ, ಪರಿಸರ ರೂರಲ್ ಡೆವಲಪ್‍ಮೆಂಟ್ ಸೊಸೈಟಿ, ಯುವ ಮುನ್ನಡೆ, ಭೂಮಿ ಬೆಳಗು ಸಾಂಸ್ಕøತಿಕ ಸಂಘ, ಮಹಿಳಾ ಸರ್ಕಾರಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ಎನ್‍ಎಸ್‍ಎಸ್ ಘಟಕ, ಪ್ರಾದೇಶಿಕ ಅರಣ್ಯ ವಿಭಾಗದ ವಲಯ ಅರಣ್ಯ ಇಲಾಖೆ ಕಚೇರಿ ವತಿಯಿಂದ ವಿಶ್ವ ಭೂಮಿ ದಿನದ ನಿಮಿತ್ತ ಪರಿಸರ ನಡಿಗೆ ಮೂಲಕ ಒಂದು ದಿನದ ಪರಿಸರ ಅಧ್ಯಯನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಜೀವ ವೈವಿಧ್ಯತೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಸರ್ಕಾರಗಳು ಮಾಡಬೇಕಿದೆ. ಜೀವ ಸಂಕುಲಗಳ ಬೆಳವಣಿಗೆಗೆ ವಿಶೇಷ ಆಸಕ್ತಿ ಬೆಳೆಸಿ ಪಠ್ಯದಲ್ಲಿ ಅತಿ ಹೆಚ್ಚು ಪ್ರಕೃತಿ ವಿಷಯವನ್ನು ಅಳವಡಿಸಿಕೊಳ್ಳುವುದು ಸೂಕ್ತವಾಗಿದೆ ಎಂದರು.
ಹುಲಿಕೆರೆ ಮೀಸಲು ಅರಣ್ಯದಲ್ಲಿರುವ ಸಸ್ಯ ಸಂಕುಲಗಳ ಬಗ್ಗೆ ಮನವರಿಕೆ ಮಾಡಿಕೊಟ್ಟ ಅಣ್ಣಯ್ಯ ಅವರು, ಇಲ್ಲಿರುವ ರಕ್ತಚಂದನ ವಿಶೇಷ ಸಸ್ಯ ಪ್ರಬೇಧವಾಗಿದ್ದು, ಈ ಭೂಮಿಗೆ ಈ ಪ್ರಬೇಧವು ಸೂಕ್ತವಾಗಿದೆ. ಅಪರೂಪದ ಸಸ್ಯ ಪ್ರಬೇಧಗಳಾದ ಶ್ರೀಗಂಧ, ಮತ್ತಿ ಸಹಿತ ಹಲವು ಗಿಡ-ಮರಗಳನ್ನು ಇಲ್ಲಿ ಕಾಣಬಹುದಾಗಿದೆ. ಮಕ್ಕಳು ಸಸ್ಯ ಪ್ರಬೇಧಗಳು, ಪಕ್ಷಿ ಪ್ರಬೇಧಗಳು ಮತ್ತು ಪ್ರಾಣಿ ಪ್ರಬೇಧಗಳ ಬಗ್ಗೆ ತಿಳಿದುಕೊಳ್ಳುವುದು ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪರಿಸರ ಸಂಸ್ಥಿಯು ಎರಡು ದಶಕಗಳಿಂದ ಈ ಅಧ್ಯಯನ ನಡೆಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯಲ್ಲಿ ಅರಣ್ಯೀಕರಣದ ಬಗ್ಗೆ ಹೆಚ್ಚು ಕಾಳಜಿಯನ್ನು ಬೆಳಸಬೇಕಾಗಿದೆ. ಈ ದಿಸೆಯಲ್ಲಿ ಎನ್‍ಎಸ್‍ಎಸ್, ಎಸ್‍ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್ ಸೇರಿದಂತೆ ಸ್ವಯಂ ಸೇವಾ ಸಂಸ್ಥೆಗಳು ಕಾರ್ಯಪ್ರವೃತ್ತರಾಗಬೇಕು ಎಂದು ಕಿವಿಮಾತು ಹೇಳಿದರು.
ಪ್ರಾದೇಶಿಕ ವಲಯದ ಮಂಡ್ಯ ಅರಣ್ಯಾಧಿಕಾರಿ ಚೈತ್ರ ಅವರು ಹುಲಿಕೆರೆ ಅರಣ್ಯವು 1267 ಹೆಕ್ಟೇರ್ ಪ್ರದೇಶವನ್ನು ಹೊಂದಿದ್ದು, ಇದನ್ನು ಸಂರಕ್ಷಿಸುವ ಕಾರ್ಯವನ್ನು ಅರಮ್ಯ ಇಲಾಖೆಯ ಸಿಬ್ಬಂದಿಗಳು 24 ಗಂಟೆಗಳ ಕಾಲ ಕರ್ತವ್ಯದಲ್ಲಿರುತ್ತಾರೆ. ಬೇಸಿಗೆಯಲ್ಲಿ ಕಾಡ್ಗಿಚ್ಚು ತಪ್ಪಿಸಿ ಜೀವ ವೈವಿಧ್ಯತೆಯನ್ನು ಉಳಿಸಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.
ಪರಿಸರ ರೂರಲ್ ಡೆವಲಪ್‍ಮೆಂಟ್ ಸೊಸೈಟಿಯ ಮಂಗಲ ಎಂ. ಯೋಗೀಶ್ ಮಾತನಾಡಿ, ವಿವಿಧ ಪರಿಸರ ಹಬ್ಬದ ದಿನಗಳಂದು ಜೀವ ಸಂಕುಲಗಳ ಪರಿಚಯಿಸುವಿಕೆ ಮತ್ತು ಉಳಿವಿಗಾಗಿ ಪರಿಸರ ನಡಿಗೆ ಮೂಲಕ ವಿವಿಧತೆಯ ಪ್ರಬೇಧಗಳನ್ನು ಪರಿಚಯ ಮಾಡಿಸುತ್ತಾ ಬಂದಿರುತ್ತದೆ. ಮುತ್ತತ್ತಿ, ಚುಂಚನಗಿರಿ, ರಂಗನತಿಟ್ಟು, ಗೆಂಡೆಹೊಸಹಳ್ಳಿ ಪಕ್ಷಿಧಾಮ ಈ ರೀತಿಯ ಎಲ್ಲ ಸಂಕುಲಗಳಿರುವ ಪ್ರದೇಶಗಳಿಗೆ ಕರೆದೊಯ್ದು ಅಧ್ಯಯನ ಶಿಬಿರಗಳನ್ನು ನಡೆಸುತ್ತಾ ಬಂದಿರುತ್ತದೆ ಎಂದರು.
ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ಸಂಯೋಜನಾಧಿಕಾರಿ ಪೆÇ್ರ. ಭಾಗ್ಯ, ಪರಿಸರ ಸಂಸ್ಥೆ ಕಾರ್ಯದರ್ಶಿ ಕೆ.ಪಿ. ಅರುಣಕುಮಾರಿ, ಭೂಮಿ ಬೆಳಗು ಸಾಂಸ್ಕøತಿಕ ಸಂಘದ ಕಿರಣ್‍ಗೌಡ ಇತರರು ಹಾಜರಿದ್ದರು.
ಹುಲಿಕೆರೆ ಮೀಸಲು ಅರಣ್ಯ ಪ್ರದೇಶದಲ್ಲಿ ವಿವಿಧ ಸಸ್ಯ ಪ್ರಬೇಧಗಳನ್ನು ಈ ಅಧ್ಯಯನ ಶಿಬಿರಗಳಲ್ಲಿ ಪರಿಚಯಿಸಲಾಯಿತು. ತರುವಾಗ ಹುಲಿಕೆರೆಚಾನಲ್ ಬುಗ ಪ್ರದೇಶಕ್ಕೆ ಭೇಟಿ ನೀಡಿ ಅದರ ಮಹತ್ವವನ್ನು ಯುವಜನರಿಗೆ ತಿಳಿಸಿಕೊಡಲಾಯಿತು.
ಇದೇ ವೇಳೆ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ಯುವಜನರಿಗೆ ಬಹುಮಾನ ವಿತರಿಸಲಾಯಿತು. ರಕ್ಷಿತ ಜಿ.ಆರ್. ಪ್ರಥಮ, ಹರ್ಷಿತಾ ಟಿ.ಕೆ. ದ್ವಿತೀಯ, ಪೂಜಾ ಟಿ. ತೃತೀಯ ಬಹುಮಾನಗಳನ್ನು ಪಡೆದುಕೊಂಡರು.