ಜೀವ ವೈವಿಧ್ಯದ ಅಪರೂಪ ಸಸ್ಯ, ಪ್ರಾಣಿ ಸಂಕುಲದ ಸಂರಕ್ಷಣೆ ಅಗತ್ಯ: ಸಮದ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.02: ಜಿಲ್ಲೆಯಲ್ಲಿ ಸಾಕಷ್ಟು ಜೀವ ವೈವಿಧ್ಯತೆ ಇದೆ. ಅದನ್ನು ನಾವು ಅಧುನಿಕತೆಯಿಂದಾಗಿ ಕಳೆದುಕೊಳ್ಳುವ ಬೀತಿ ಇದೆ. ಅವುಗಳನ್ನು ಸಂರಕ್ಷಿಸುವ ಸವಾಲು ನಮ್ಮ ಮುಂದೆ ಇದೆ ಎಂದು ಪರಿಸರ ತಜ್ಞ ಸಮದ್ ಕೊಟ್ಟೂರು  ಹೇಳಿದರು.
ಅವರು ಇಂದು ನಗರದ ರಾಘವ ಕಲಾ ಮಂದಿರದಲ್ಲಿ ನಡೆಯುತ್ತಿರುವ 22 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಮ್ಮಿಕೊಂಡಿದ್ದ ಅಖಂಡ ಬಳ್ಳಾರಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ‌ ಕುರಿತು ನಡೆದ   ನಾಲ್ಕನೇ ಗೋಷ್ಟಿಯಲ್ಲಿ ಬಳ್ಳಾರಿ ಜಿಲ್ಲೆಯ ಜೀವ ವೈವಿಧ್ಯತೆಯ ಸಂರಕ್ಷಣೆ ಹಾಗು ಸವಾಲುಗಳ‌ ಕುರಿತು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ದೇಶದಲ್ಲಿಯೇ ಅಳಿವಿನ ಅಂಚಿನಲ್ಲಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್, ನೀರು‌ನಾಯಿ, ಸೈಕ್ಯಾಡ್ ಸಸ್ಯ, ರಣ ಹದ್ದುಗಳು ಇದ್ದು. ಇವುಗಳು ಆಧುನಿಕತೆಯಿಂದ ಅಲ್ಲದೆ ಹಲವು ಕಾರಣಗಳಿಂದ ಅಳಿವಿನ ಅಂಚಿನಲ್ಲಿವೆ. ಇವುಗಳನ್ನು ಸಂರಕ್ಷಣೆ ಮಾಡುವುದು ಜನರು ಮತ್ತು ಜಿಲ್ಲಾಡಳಿತದ ಮೇಲಿದೆಂದರು.
ಆಶಯ ನುಡಿಗಳನ್ನಾಡಿದ ತುಂಗಭದ್ರ ರೈತ ಸಂಘದ ಅಧ್ಯಕ್ಚ ದರೂರು ಪುರುಷೋತ್ತಮಗೌಡ, ಜಿಲ್ಲೆಯ ಲ್ಲಿ ಕೃಷಿ, ನೀರಾವರಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಇದ್ದು ಅವುಗಳ ಬಗ್ಗೆ ಜನ ಪ್ರತಿನಿಧಿಗಳು ಗಮನ ಹರಿಸಬೇಕು ಎಂದರು.
ಹಡಗಲಿಯ ಡಾ.ಎಸ್.ಎಸ್.ಪಾಟೀಲ್ ಅಧ್ಯಕ್ಷತೆವಹಿಸಿದ್ದರು. ಕೃಷಿ ಬಗ್ಗೆ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಕೈಗಾರಿಕೆಗಳ ಬಗ್ಗೆ ಸೋಮಶೇಖರಗೌಡ ಮಾತನಾಡಿದರು. ಕಾರ್ಮಿಕ ಮುಖಂಡ ಜೆ.ಸತ್ಯಬಾಬು. ಟಿ.ಜಿ.ವಿಠ್ಠಲ್, ವೀರೇಶ್ ದಮ್ಮೂರು, ವಿನಯಕುಮಾರ್ ಎಂ.ಎಸ್. ಮೊದಲಾದವರು ಇದ್ದರು.