ಜೀವ ವಿಮಾ ನಿಗಮದ ಹೊಸ ಪಾಲಿಸಿಗಳ ಅರಿವು ಮೂಡಿಸಿ: ಎಂ.ನಾಗೇಶ್ವರರಾವ್

ಸಂಜೆವಾಣಿ ವಾರ್ತೆ
ನಂಜನಗೂಡು: ಫೆ.05:- ಜೀವ ವಿಮಾ ನಿಗಮ ದೇಶದ ಜನರ ಕುಟುಂಬಗಳ ಆರ್ಥಿಕ ಭದ್ರತೆ ನೀಡುವಲ್ಲಿ ಮುಂಚೂಣಿಯಲ್ಲದೆ, ನಿಗಮದ ಹೊಸ ಪಾಲಿಸಿಗಳು ಜನ ಸ್ನೇಹಿಯಾಗಿದ್ದು, ಜೀವವಿಮಾ ಪ್ರತಿನಿಧಿಗಳು ಜನರಿಗೆ ಹೊಸ ಪಾಲಿಸಿಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಜೀವವಿಮಾ ನಿಗಮದ ಜಿಲ್ಲಾ ಮಾರುಕಟ್ಟೆ ವ್ಯವಸ್ಥಾಪಕ ಎಂ.ನಾಗೇಶ್ವರರಾವ್ ಹೇಳಿದರು.
ನಗರದ ನಂದಿ ಕನ್ವೆನ್ಷನ್ ಹಾಲ್ ನಲ್ಲಿ ಶನಿವಾರ ನಡೆದ ಜೀವ ವಿಮಾ ನಿಗಮದ ಸರ್ವಸದಸ್ಯರ ಮಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿಗಮ ಜೀವನ್ ಉತ್ಸವ್ ಎಂಬ ಹೊಸ ಪಾಲಿಸಿಯನ್ನು ಬಿಡುಗಡೆ ಮಾಡಿದೆ, ನಮ್ಮ ಫೆನ್ಷನ್ ಪ್ಲಾನ್, ಹೆಲ್ತ್ ಇನ್ಸೂರೆನ್ಸ್ ಪಾಲಿಸಿಗಳ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಮೂಡಿಸುವ ಮೂಲಕ ಜನರ ಕುಟುಂಬಗಳ ಆರ್ಥಿಕ ಭದ್ರತೆ ನೀಡುವ ಗುರುತರ ಜವಾಬ್ದಾರಿ ವಿಮಾ ಪ್ರತಿನಿಧಿಗಳದ್ದಾಗಿದೆ, ನಿಗಮದ ಜೊತೆಗೆ ಪ್ರತಿಣಿದಿಗಳು ತಾವು ಬೆಳೆದು ಎಲ್ಲ ಪ್ರತಿನಿಧಿಗಳು ಎಂ.ಡಿ.ಆರ್.ಟಿ ಪ್ರತಿನಿಧಿಗಳಾಗಬೇಕು ಎಂದು ಆಶಿಸಿದರು.
ಜೀವ ವಿಮಾ ಪ್ರತಿನಿಧಿಗಳ ಸಂಘಟನೆ ಅಧ್ಯಕ್ಷ ಎನ್.ರವಿ ಮಾತನಾಡಿ ಪ್ರತಿನಿಧಿಗಳು ಹೆಚ್ಚು-ಹೆಚ್ಚು ಸಂಘಟಿತರಾದಾಗ ಮಾತ್ರ ನಿಗಮದ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.ನಿಗಮದ ಹೊಸ ಪಾಲಿಸಿಗಳ ಬಗ್ಗೆ ನಿಖರ ಜ್ಞಾನ ಹೊಂದಿ, ಜನಸಾಮಾನ್ಯರಿಗೆ ಪಾಲಿಸಿಗಳ ಉಪಯೋಗಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಜೀವವಿಮಾ ನಿಗಮದೊಂದಿಗೆ ಪ್ರತಿನಿಧಿಗಳು ಹೆಚ್ಚಿನ ವ್ಯವಹಾರ ಮಾಡುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಜೀವವಿಮಾ ಪ್ರತಿನಿಧಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಿ.ಐ.ಟಿ.ಯು ದಕ್ಷಿಣ ವಲಯ ಸಮಿತಿ ಅಧ್ಯಕ್ಷ ಎನ್.ಮಂಜುನಾಥ್, ಹಿರಿಯ ಶಾಖಾಧಿಕಾರಿ ಎಸ್.ರಾಮಸ್ವಾಮಿ,ಉಪ ಶಾಖಾಧಿಕಾರಿ ನರಸಿಂಹನ್,ಸಿದ್ದಲಿಂಗ ಒಡೆಯರ್,ಗುರುಪಾದಸ್ವಾಮಿ,ಪ್ರದೀಪ್,ಅರವಿಂದ್ ಕುಮಾರ್, ಪುಟ್ಟರಾಜು,ಎಂ.ಪಿ.ಪ್ರಕಾಶ್,ಗುರುಪ್ರಸಾದ್,ಪಿ.ಚಂದ್ರ, ಬಸವರಾಜಪ್ಪ, ಬಿಳುಗಲಿ ನಾಗೇಂದ್ರ,ಗುರುಮೂರ್ತಿ,ಮಹದೇವಸ್ವಾಮಿ ಉಪಸ್ಥಿತರಿದ್ದರು.
ನಂಜನಗೂಡಿನ ನಂದಿ ಕನ್ವೆನ್ಷನ್ ಹಾಲ್ ನಲ್ಲಿ ಶನಿವಾರ ನಡೆದ ಜೀವ ವಿಮಾ ನಿಗಮದ ಸರ್ವಸದಸ್ಯರ ಮಾರ್ಷಿಕ ಮಹಾಸಭೆಯಲ್ಲಿ ಜೀವ ವಿಮಾ ಪ್ರತಿನಿಧಿಗಳ ಸಂಘಟನೆ ಅಧ್ಯಕ್ಷ ಎನ್.ರವಿ ಮಾತನಾಡಿದರು.