ಜೀವ ರಕ್ಷಕ ಆಹಾರ ವ್ಯರ್ಥವಾಗದಿರಲಿ

ಕಲಬುರಗಿ.ಮೇ.28: ಮನುಷ್ಯನ ಉಳಿವು, ಬೆಳವಣಿಗೆಗೆ ಪ್ರಮುಖವಾಗಿ ಬೇಕಾದ ಆಹಾರವು ಇಂದು ಕಾರಾಣಾಂತರಗಳಿಂದ ವ್ಯರ್ಥವಾಗುತಿದ್ದು, ಇದನ್ನು ಹಾಳಾಗದಂತೆ ತಡೆಗಟ್ಟಬೇಕಾದದ್ದು ಪ್ರಸ್ತುತ ತುಂಬಾ ಅವಶ್ಯಕವಾಗಿದೆಯೆಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ವಿಶ್ವ ಹಸಿವಿನ ದಿನಾಚರಣೆ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ನಗರದ ರಾಮತೀರ್ಥ ದೇವಾಸ್ಥಾನದ ಸಮೀಪವಿರುವ ಕೊಳಗೇರಿ ಮಕ್ಕಳಿಗೆ ಹಾಲು-ಹಣ್ಣುಗಳು, ಮಾಸ್ಕ್‍ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ದೇಶದಲ್ಲಿ ಪ್ರತಿದಿನವು 224 ಕೋಟಿ ರೂಪಾಯಿ ಮೌಲ್ಯದ ಆಹಾರ ವ್ಯರ್ಥವಾಗುತ್ತಿದೆ. 195.5 ದಶಲಕ್ಷ ಜನರಿಗೆ ಆಹಾರದ ಕೊರತೆಯಿಂದ ಮಾರಣಾಂತಿಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಒಟ್ಟು ಜನಸಂಖ್ಯೆಯ ಶೇ.14.8 ರಷ್ಟು ಜನರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಅವಶ್ಯಕತೆಯಷ್ಟೆ ಆಹಾರವನ್ನು ಬಳಸಿ, ಯಾವುದೇ ಕಾರಣದಿಂದಲೂ ವ್ಯರ್ಥವಾಗದಂತೆ ಜಾಗೃತಿ ವಹಿಸುವುದು ಜವಬ್ದಾರಿಯಾಗಿದೆ. ಜಗತ್ತಿನಲ್ಲಿ ಪ್ರತಿವರ್ಷ 5 ದಶಲಕ್ಷ ಮಕ್ಕಳು ಹಸಿವಿನಿಂದ ಸಾವಿಗೀಡಾಗುತ್ತಿದ್ದಾರೆ. ಬಡ ರಾಷ್ಟ್ರಗಳಲ್ಲಿ ಶೇ.50ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 40 ರಾಷ್ಟ್ರಗಳಲ್ಲಿ ಹಸಿವಿನಿಂದ ಬಳಲುವರ ಸಂಖ್ಯೆಯನ್ನು ಕಡಿಮೆ ಮಾಡಲು ಪಣತೊಡಲಾಗಿದೆಯೆಂದು ನುಡಿದರು.
ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ದೇವೇಂದ್ರಪ್ಪ ಗಣಮುಖಿ, ಅಣ್ಣಾರಾಯ.ಎಚ್.ಮಂಗಾಣೆ, ರಾಜಕುಮಾರ ಬಟಗೇರಿ ಇದ್ದರು.